ಶಿಕ್ಷಕರ ಮೇಲಿದೆ ಒಳ್ಳೆಯ ಸಮಾಜ ನಿರ್ಮಾಣದ ಜವಾಬ್ದಾರಿ

22 Dwd 6
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಶಿಕ್ಷಣ ರಾಷ್ಟç ನಿರ್ಮಾಣಕ್ಕೆ ಬುನಾದಿ. ಒಳ್ಳೆಯ ಸಮಾಜ ನಿರ್ಮಾಣದ ಜವಾಬ್ದಾರಿ ಶಿಕ್ಷಕರ ಮೇಲಿದೆ. ಆದ್ದರಿಂದ ಶಿಕ್ಷಕರು ಮೈ ಮರೆಯಬಾರದು ಎಂದು ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ವೀರೇಶಾನಂದ ಸರಸ್ವತಿ ಹೇಳಿದರು.

ನಗರದ ಭಗವಾನ್ ಶ್ರೀ ರಾಮಕೃಷ್ಣ ಮಂದಿರದ 20ನೇ ವಾರ್ಷಿಕೋತ್ಸವದ ಅಂಗವಾಗಿ ಇಲ್ಲಿನ ಡಾ. ಪಾಟೀಲ ಪುಟ್ಟಪ್ಪ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಶಿಕ್ಷಕರ ಸಮಾವೇಶದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಸರ್ಕಾರಗಳು ಶಿಕ್ಷಣಕ್ಕೆ ಮಹತ್ವ ನೀಡಿ ಶಿಕ್ಷಕರನ್ನು ಸಮರ್ಥರಾಗಿಸಿದರೆ ಶಿಕ್ಷಣ ಕ್ಷೇತ್ರವನ್ನು ಬಲಪಡಿಸಲು ಸಾಧ್ಯ. ಶಿಕ್ಷಕ ಎಂದರೆ ಕೇವಲ ಪಾಠ ಮಾಡುವುದಲ್ಲ. ಹಲವಾರು ವಿಷಯಗಳನ್ನು ಅಧ್ಯಯನ ಮಾಡಿ ಜ್ಞಾನ ಸಂಗ್ರಹಿಸಿಕೊಳ್ಳಬೇಕು. ಶಿಕ್ಷಣದ ಗುಣಮಟ್ಟ ಕುಂದಿದರೆ ಸೋಮಾರಿಗಳ ವಿಕಸನವಾಗುತ್ತದೆ. 100 ಶಾಲೆಗಳ ಮೂಲಕ ಒಳ್ಳಯ ಶಿಕ್ಷಣ ನೀಡಿದರೆ 1,000 ಜೈಲಗಳ ನಿರ್ಮಾಣಕ್ಕೆ ಕಡಿವಾಣ ಹಾಕಬಹುದು ಎಂದರು.

ಧಾರವಾಡ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ವಿಜಯಾನಂದ ಸರಸ್ವತಿ ಪ್ರಾಸ್ತಾವಿಕವಾಗಿ ಮಾತನಾಡಿ, 1993ರಲ್ಲಿ ಭಾಡಿಗೆ ಕಟ್ಟಡದಲ್ಲಿ ಆರಂಭವಾದ ಆಶ್ರಮವು, 20ನೇ ವಾರ್ಷಿಕೋತ್ಸವ ಆಚರಿಸುತ್ತಿರುವುದು ಇತಿಹಾಸ. ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣ ಆಶ್ರಮದ ಉದ್ದೇಶ ಎಂದರು.

ಹಿರಿಯ ವಿಜ್ಞಾನಿ ಡಾ. ಎಸ್.ಎಂ. ಶಿವಪ್ರಸಾದ್ ಅವರು `21ನೇ ಶತಮಾನದ ಶಿಕ್ಷಣ ಪದ್ಧತಿ' ವಿಷಯ ಕುರಿತು ಮಾತನಾಡಿ, ಮುಂದಿನ 15 ವರ್ಷಗಳಲ್ಲಿ ಜಗÀತ್ತು ಸಂಪೂರ್ಣ ಕಂಪ್ಯುಟರ್ ಯುಗವಾಗುವುದರಲ್ಲಿ ಸಂದೇಹವಿಲ್ಲ ಎಂದರು.

ಮೈಸೂರಿನ ಶ್ರೀ ರಾಮಕೃಷ್ಣ ನೈತಿಕ ಹಾಗೂ ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಶ್ರೀ ಸ್ವಾಮಿ ಮಹಾಮೇಧಾನಂದಜಿ ಮಹಾರಾಜರು `ಶಿಕ್ಷಣ ವೃತ್ತಿಯ ಪಾವಿತ್ರ‍್ಯತೆ: ಸವಾಲುಗಳು, ಸರಿಯುತ್ತರ' ವಿಷಯ ಕುರಿತು ಮಾತನಾಡಿ, ಪ್ರಸ್ತುತ ಶಿಕ್ಷಣವು ಕೆಲ ಪ್ರಭಾವಿಗಳ ಸ್ವತ್ತಾಗಿದೆ. ಅದು ಸ್ವತಂತ್ರವಾಗಿರಬೇಕು. ಶಿಕ್ಷಕ ತನ್ನನ್ನು ಅರಿತು ಬೇರೆಯವರಿಗೆ ಬೋಽಸಬೇಕು ಎಂದರು.

ಕೊಡಗು ಪೊನ್ನಂಪೇಟೆ ಆಶ್ರಮದ ಸ್ವಾಮಿ ಪ್ರಕಾಶಾನಂದ ಮಹಾರಾಜ್, ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಶ್ರೀ ಜಿತಕಾಮಾನಂದಜಿ ಮಹಾರಾಜ್, ಮೋಹನ ರಾಮದುರ್ಗ, ಸುಭಾಸ ಗೌಡರ, ಅರ್ಜುನ ಅರಗಾಡೆ, ಆಶೋಕ ಕಾಟೆನ್ನವರ, ಈರಣ್ಣ ಅಗಲಗಟ್ಟಿ, ಗಣೇಶ ಕುಂದರಗಿ, ಸಂಜೀವ ಕೂಡಿಗೆ, ರಾಜು ಬೀಳಗಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net