

ಚಿತ್ರದುರ್ಗ:ನಗರದ ವೀರಶೈವ ಸಮಾಜ ಹಾಗೂ ಹರಪನಹಳ್ಳಿ ಮೇಗಳಪೇಟೆ ಶ್ರೀ ಗುಗ್ಗಳ ವೀರಭದ್ರೇಶ್ವರ ದೇವಸ್ಥಾನ ಸಮಿತಿ ಆಶ್ರ ಯದಲ್ಲಿ ಚಿತ್ರದುರ್ಗದ ಶ್ರೀ ನೀಲಕಂಠೇಶ್ವರ ದೇವಾಲಯದಲ್ಲಿ ಏ.23ರಂದು ಶ್ರೀ ವೀರಭದ್ರ ದೇವರ ಅಗ್ನಿಕುಂಡ ಕಾರ‌್ಯಕ್ರಮ ಏರ್ಪಡಿಸ ಲಾಗಿದೆ. ಅಂದು ಬೆಳಗ್ಗೆ 6.30ರಿಂದ ಜಾನಪದ ಕಲಾ ತಂಡಗಳೊಂದಿಗೆ ನಗರದ ಶ್ರೀ ಉಜ್ಜಯಿನಿ ಮಠದಿಂದ ಗುಗ್ಗಳ ಮೆರವಣಿಗೆ ಆರಂ ಭವಾಗಲಿದೆ. ದೊಡ್ಡಪೇಟೆ,ಚಿಕ್ಕಪೇಟೆ,ಆನೆಬಾಗಿಲು,ಮಹಾತ್ಮಗಾಂಧಿ ವೃತ್ತ ಮಾರ್ಗ ಶ್ರೀ ನೀಲಕಂಠೇಶ್ವರ ಸ್ವಾಮಿ ದೇವಾಲಯ ತಲುಪಲಿ ದೆ. ಮೆರವಣಿಗೆ ಬಳಿಕ ಅಗ್ನಿಕುಂಡ ಜರುಗಲಿದೆ. ದೇವಾಲಯದ ಸಮುದಾಯ ಭವನದಲ್ಲಿ ಭಕ್ತರಿಗೆ ಮಹಾದಾಸೋಹ ಏರ್ಪಡಿಸಲಾ ಗಿದೆ ಎಂದು ವೀರಶೈವ ಸಮಾಜದ ಪ್ರಕಟಣೆ ತಿಳಿಸಿದೆ.