

ಬಂಗಾರಪೇಟೆ: ಸ್ಥಳಿಯ ನ್ಯಾಯಾಲಯದ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ಒಟ್ಟು 2,084 ಪ್ರಕರಣ ಇತ್ಯರ್ಥ ಪಡಿಸಲಾಗಿದೆ.
ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶೆ ಸುಕೀತಾ .ಎಸ್.ಹದ್ದಿ ಅವರು 9 ಸಿವಿಲ್ ಪ್ರಕರಣಗಳು ಮತ್ತು ಕ್ರಿಮಿನಲ್ ಪ್ರಕರಣಗಳು 1,293 ಸೇರಿ ಒಟ್ಟು 1,302 ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು ಮೊತ್ತ 1,11,09,869 ರೂ.ಗಳನ್ನು ವಾದಿಗಳಿಗೆ ಕೊಡಿಸಿ ಇತ್ಯರ್ಥಪಡಿಸಿರುತ್ತಾರೆ.
ಸದರಿ ನ್ಯಾಯಾಲಯದಲ್ಲಿ ಬ್ಯಾಂಕ್ನ 14,817 ಪಿಎಲ್ಸಿ ಕೇಸ್ ಇತ್ಯರ್ಥಪಡಿಸಿ ಇದರಿಂದ ಬಂದ 5,06,40,495 ರೂ. ಮೊತ್ತವನ್ನು ಬ್ಯಾಂಕಿಗೆ ಜಮೆ ಮಾಡಲಾಯಿತು.
ಒಂದನೇ ಅಪರ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಚಂದ್ರಶೇಖರ್ ಅಲಬೂರ್ ವ್ಯಾಪ್ತಿಗೆ ಬರುವ ಅಪರ ನ್ಯಾಯಾಲಯದಲ್ಲಿ 14 ಚೆಕ್ ಬೌನ್ಸ್ ಕೇಸುಗಳು ಇತ್ಯಾರ್ಥ ಪಡಿಸಿ ಇದರಿಂದ 38,55,000 ರೂ.ವಾದಿಗಳು ಪಡೆದಿರುತ್ತಾರೆ. 3 ಬ್ಯಾಂಕ್ ಕೇಸುಗಳನ್ನು ಇತ್ಯರ್ಥ ಪಡಿಸಿ ಇದರಿಂದ 6,85,000 ರೂ., 13 ಸಿವಿಲ್ ಪ್ರಕರಣದಡಿ 10,99,466 ರೂ.ವಾದಿಗಳು ಅನುಕೂಲ ಪಡೆದಿದ್ದಾರೆ. 113 ಮಂದಿ ಪ್ರಮಾಣ ಕೇಸುಗಳನ್ನು ಇತ್ಯರ್ಥ ಪಡಿಸಿದ್ದಾರೆ. 614 ಕ್ರಿಮಿನಲ್ ಇತ್ಯರ್ಥ ಪಡಿಸಿ 6,45,200 ರೂ. ಸರ್ಕಾರಕ್ಕೆ ತುಂಬಿರುತ್ತಾರೆ.
ಎರಡನೇ ಅಪರ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದಲ್ಲಿ 15 ಚೆಕ್ ಬೌನ್ಸ್ ಕೇಸುಗಳು ಇತ್ಯರ್ಥ ಪಡಿಸಿ ಇದರಿಂದ 40,61,297 ವಾದಿಗಳು ಪಡೆದಿರುತ್ತಾರೆ. 9 ಸಿವಿಲ್ ಪ್ರಕರಣಗಳು ಇತ್ಯರ್ಥ ಪಡಿಸಿ ಇದರಿಂದ 13,36,748 ರೂ.ವಾದಿಗಳು ಪಡೆದಿರುತ್ತಾರೆ. 1 ಕ್ರಿಮಿನಲ್ ಇತ್ಯರ್ಥಪಡಿಸಿ 1 ಲಕ್ಷ ರೂ. ವಾದಿಗಳು ಪಡೆದಿದ್ದಾರೆ.