206 ನೇ ಭೀಮಾ ಕೋರೆಗಾಂವ್ ವಿಜಯೋತ್ಸವ

2 mlv 1
ಮಳವಳ್ಳಿಯಲ್ಲಿ ಆಯೋಜಿಸಿದ್ದ ಕಾರ್ಯಕಮದಲ್ಲಿ ಓಂಕಾರೇಶ್ವರ ಸ್ವಾಮೀಜಿ ಮಾತನಾಡಿದರು. ಎಂ.ವಿ.ಕೃಷ್ಣ, ಬೆಳಕವಾಡಿ ರಂಗಸ್ವಾಮಿ, ಪೂರಿಗಾಲಿ ಜಯರಾಜು, ಸಿ.ಮಾದು, ಸಿದ್ದರಾಜು, ಕಿರಣ್ ಶಂಕರ್, ಕಾಂತರಾಜು, ಸುರೇಶ್, ಮುದ್ದರಾಜ್, ಶಾಂತರಾಜು ಇದ್ದರು.
Published on

ಮಳವಳ್ಳಿ: ಗೌತಮ ಬುದ್ಧ, ಬಸವಣ್ಣ ಹಾಗೂ ಅಂಬೇಡರ್ ಜಗತ್ತಿಗೆ ಆದರ್ಶ ವ್ಯಕ್ತಿಗಳು ಎಂದು ಕಲ್ಯಾಣ ಬಸವೇಶ್ವರ ಮಠದ ಪರಮ ಓಂಕಾರೇಶ್ವರ ಸ್ವಾಮೀಜಿ ತಿಳಿಸಿದರು.

ತಾಲೂಕು ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಹಯೋಗದಲ್ಲಿ ಪಟಣ್ಣದ ಪ್ರವಾಸಿ ಮಂದಿರದ ಬಳಿಯಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ 206 ನೇ ಭೀಮಾ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಸ್ವಾತಂತ್ರೃ, ಸಮಾನತೆ, ಸಹೋದರತೆ, ಸ್ವಾಭಿಮಾನಕ್ಕಾಗಿ ನಡೆದ ಯುದ್ಧ ಕೋರೆಂಗಾವ್ ವಿಜಯೋತ್ಸವ. ಮಹಾರಾಷ್ಟ್ರದ ಭೀಮ ನದಿಯ ದಡದಲ್ಲಿ 1818 ರ ಜ.1 ರಂದು 500 ಸೈನಿಕರು, 30 ಸಾವಿರ ಪೇಶ್ವೆಗಳ ನಡುವೆ ನಡೆದ ಕದನ ಜಗತ್ತಿನ ಸ್ವಾಭಿಮಾನ ಯುದ್ಧ. ಇಂತಹ ವೀರ ಸೈನಿಕರ ಸ್ಮರಣಾರ್ಥ ವಿಜಯೋತ್ಸವ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ಡಿವೈಎಸ್ಪಿ ಕೃಷ್ಣಯ್ಯ ಕಾರ್ಯಕ್ರಮ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಐಪಿಎಸ್ ಅಧಿಕಾರಿ ವಿ.ನಂಜುಂಡಸ್ವಾಮಿ ವಹಿಸಿದ್ದರು. ಇದಕ್ಕೂ ಮೊದಲು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಘಟಕರು ನೂರಾರು ಬೈಕ್‌ಗಳಲ್ಲಿ ವಿಜಯೋತ್ಸವ ರ‌್ಯಾಲಿ ನಡೆಸಿದರು.

ನಿವೃತ್ತ ಪ್ರಾಧ್ಯಾಪಕ ಎಂ.ವಿ.ಕೃಷ್ಣ, ಬೆಳಕವಾಡಿ ರಂಗಸ್ವಾಮಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಜನಾರ್ದನ್, ಜಿಪಂ ಮಾಜಿ ಸದಸ್ಯ ಪೂರಿಗಾಲಿ ಜಯರಾಜು, ತಾಪಂ ಮಾಜಿ ಉಪಾಧ್ಯಕ್ಷ ಸಿ.ಮಾದು, ಪುರಸಭೆ ಸದಸ್ಯ ಸಿದ್ದರಾಜು, ಮಾಜಿ ಸದಸ್ಯ ಕಿರಣ್ ಶಂಕರ್, ಮುಖಂಡರಾದ ಬೆಳಕವಾಡಿ ಕಾಂತರಾಜು, ಸುರೇಶ್, ಮುದ್ದರಾಜ್, ಶಾಂತರಾಜು, ಪಂಡಿತಹಳ್ಳಿ ಸುರೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net