

ಕಲಬುರಗಿ: ಪ್ರಸ್ತುತ ಭಾರತವು ೩.೬ ಟ್ರಿಲಿಯನ್ ಡಾಲರ್ ಆರ್ಥಿಕತೆ ಹೊಂದಿದ್ದು, ೨೦೪೭ರ ವೇಳೆಗೆ ಶೇ.ಏಳು ದರದಲ್ಲಿ ಆರ್ಥಿಕ ಬೆಳವಣಿಗೆಯಾದರೆ ಅದು ೫೫ ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲಿದೆ ಎಂದು ಚನ್ನೆÊ ಮದ್ರಾಸ್ ಸ್ಕೂಲ್ ಆಫ್ ಎಕನಾಮಿಕ್ಸ್ ನಿರ್ದೇಶಕ ಪ್ರೊ.ಎನ್.ಆರ್.ಭಾನುಮೂರ್ತಿ ಹೇಳಿದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ದೆಹಲಿಯ ಐಸಿಎಸ್‌ಎಸ್‌ಆರ್‌ನ ಸಹಯೋಗದಲ್ಲಿ ಆರ್ಥಿಕ ಅಧ್ಯಯನ ಮತ್ತು ಯೋಜನಾ ವಿಭಾಗವು ಬುಧವಾರ ಆಯೋಜಿಸಿದ್ದ ವಿಕಾಸಿತ ಭಾರತ-೨೦೪೭: ಸ್ವಾವಲಂಬನೆಯಡೆಗೆ ಕುರಿತ ಸಮ್ಮೇಳನದಲ್ಲಿ ಪ್ರಧಾನ ಭಾಷಣ ಮಾಡಿ, ೨೦೪೭ರ ವೇಳೆಗೆ ಭಾರತ ೫೫ ಟ್ರಿಲಿಯನ್ ಆರ್ಥಿಕತೆಯಾಗುವುದು ಸಾಧ್ಯವಿದೆ. ಸಾಧಿಸುವುದು ಹೇಗೆ? ಎಂಬುದು ಇದರ ಮುಖ್ಯ ತಿರು ಎಂದರು.
ಭಾರತದ ಆರ್ಥಿಕತೆಯ ಸೂಕ್ಷö್ಮತೆಯನ್ನು ನಾವು ಅರ್ಥ ಮಾಡಿಕೊಳ್ಳಬೇಕು. ನನ್ನ ದೃಷ್ಟಿಯಲ್ಲಿ ವಿಕಾಸಿತ ಭಾರತ ಆಗಲು ನಾವು ಎಳು ಎಸ್ ತಂತ್ರ ಅನುಸರಿಸಬೇಕು. ಮೊದಲು ಉಳಿತಾಯ, ೨ನೇಯದ್ದು ಮಾನವ ಸಂಪನ್ಮೂಲ, ೩ನೇ ಕೇಂದ್ರ ರಾಜ್ಯಗಳೊಂದಿಗೆ ಕೆಲಸ ಮಾಡುವುದು, ೪ನೇಯದ್ದು ಅಂಕಿ-ಅAಶಗಳು, ೫ನೇಯದ್ದು ಆರ್ಥಿಕತೆಯಲ್ಲಿ ರಚನಾತ್ಮಕ ರೂಪಾಂತರ ತರುವುದು, ೬ನೇಯದ್ದು ಸುಸ್ಥಿರ ಅಭಿವೃದ್ಧಿ ಗುರಿ, ೭ನೇಯದ್ದು ಸಣ್ಣ ಉದ್ಯಮಗಳ ಸಮರ್ಪಕ ಅಂಕಿ-ಅAಶ ಹೊಂದಿರುವುದು ಅಗತ್ಯ ಎಂದು ವಿವರಿಸಿದರು.
ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ೨೫ ವರ್ಷಗಳಲ್ಲಿ ಭಾರತವು ಎಲ್ಲ ಆಯಾಮಗಳಲ್ಲಿ ಸಾಕಷ್ಟು ಬದಲಾಗಿದೆ. ಮೊದಲು ಲೈಸೆನ್ಸ್ ರಾಜ್ ವ್ಯವಸ್ಥೆಯಿಂದ ವ್ಯಾಪಾರ ಮಾಡುವುದು ತುಂಬಾ ಕಷ್ಟಕರ. ಆದರೆ ಇಂದು ಯಾವುದೇ ವ್ಯವಹಾರ ಮಾಡಲು ಕಡಿಮೆ ಸಮಯದಲ್ಲಿ ಅನುಮತಿ ಪಡೆಯುವಂತಾಗಿದೆ ಎಂದು ತಿಳಿಸಿದರು.
ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ, ಉದ್ಯಮಿ ವಿದ್ಯಾಸಾಗರ್, ಬಿ.ಇಂದ್ರಸೇನ್ ರೆಡ್ಡಿ ಮಾತನಾಡಿದರು.
ಕುಲಸಚಿವ ಪ್ರೊ.ಆರ್.ಆರ್.ಬಿರಾದಾರ್, ಪ್ರೊ.ಅಶ್ವಿನಿ ಮಹಾಜನ್, ಡಾ.ಬಸವರಾಜ ಎಂ.ಎಸ್. ಇದ್ದರು. ಪ್ರೊ.ಕೆ.ಪದ್ಮಶ್ರೀ ಸ್ವಾಗತಿಸಿದರು. ಡಾ.ಎಸ್.ಲಿಂಗಮೂರ್ತಿ ಪ್ರಾಸ್ತಾವಿಕ ಮಾತನಾಡಿದರು. ಡಾ.ಸುಮಾ ಸ್ಕಾರಿಯಾ ವಂದಿಸಿದರು. ಡಾ.ಜಯದೇವಿ ಜಂಗಮಶೆಟ್ಟಿ ಮತ್ತು ಡಾ.ಸ್ವಪ್ನಿಲ್ ಚಾಪೇಕರ್ ನಾಡಗೀತೆ ಮತ್ತು ರಾಷ್ಟçಗೀತೆ ಹಾಡಿದರು.
ಡಾ.ಎಸ್.ಲಿಂಗಮೂರ್ತಿ, ಡಾ.ಬಸವರಾಜ ಎಂ.ಎಸ್ ಮತ್ತು ಡಾ.ಶಿವಕುಮಾರ ಬೆಳ್ಳಿ ಸಂಪಾದಿಸಿದ ಪುಸ್ತಕವನ್ನು ಲೋಕಾರ್ಪಣೆ ಮಾಡಲಾಯಿತು.