ಉಡುಪಿಯಲ್ಲಿ ಒಂದೇ ದಿನ 204 ಪಾಸಿಟಿವ್

corona new
Published on

ಉಡುಪಿ: ಜಿಲ್ಲೆಯಲ್ಲಿ ಶುಕ್ರವಾರ ಒಂದೇ ದಿನ 204 ಮಂದಿಗೆ ಕೋವಿಡ್-19 ದೃಢಗೊಂಡಿದ್ದು, ಒಟ್ಟು 768 ಪ್ರಕರಣಗಳೊಂದಿಗೆ ಜಿಲ್ಲೆ ರಾಜ್ಯದಲ್ಲೇ ಅತ್ಯಧಿಕ ಪ್ರಕರಣಗಳೊಂದಿಗೆ ಮುಂದುವರಿದಿದೆ.

ರಾಜ್ಯದಲ್ಲಿ ಒಂದು ಜಿಲ್ಲೆ ಒಂದು ದಿನದಲ್ಲಿ 204 ಪ್ರಕರಣಗಳನ್ನು ದಾಖಲಿಸಿರುವುದು ಕೂಡ ಇದೇ ಮೊದಲು. ಇಷ್ಟೂ ಮಂದಿಯೂ ಮಹಾರಾಷ್ಟ್ರದಿಂದ ವಾಪಸ್ ಬಂದು ಸಾಂಸ್ಥಿಕ ಕ್ವಾರಂಟೈನ್ ಪೂರೈಸಿ ಮನೆಗೆ ತೆರಳಿದ್ದರು. ಗಂಟಲು ದ್ರವ ಮಾದರಿ ಸಂಗ್ರಹಿಸಿದ್ದರೂ ಲ್ಯಾಬ್ ಕೊರತೆಯಿಂದಾಗಿ ಪರೀಕ್ಷೆ ವರದಿ ಬಂದಿರಲಿಲ್ಲ. ಈಗ ವರದಿ ಬಂದಿದ್ದು, ಎಲ್ಲರನ್ನೂ ಕೋವಿಡ್ ಆಸ್ಪತ್ರೆಗಳಿಗೆ ದಾಖಲಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿದೆ.

ಜೂ.1ರಂದು 73, ಎರಡರಂದು 150, ಮೂರರಂದು 61, ನಾಲ್ಕರಂದು 92 ಮಂದಿಗೆ ಸೋಂಕು ಖಚಿತಗೊಂಡಿತ್ತು. ಸೋಂಕಿತ 768 ಮಂದಿಯಲ್ಲಿ 685 ಸಕ್ರಿಯ ಪ್ರಕರಣಗಳಿದ್ದು, 82 ಮಂದಿ ಬಿಡುಗಡೆಯಾಗಿದ್ದಾರೆ, ಓರ್ವ ಮರಣ ಹೊಂದಿದ್ದಾರೆ.

ದ.ಕ. ಜಿಲ್ಲೆಯಲ್ಲಿ ಶುಕ್ರವಾರ 8 ಮಂದಿಯಲ್ಲಿ ಸೋಂಕು ದೃಢಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net