203 ಯೂನಿಟ್ ರಕ್ತ ಸಂಗ್ರಹ: ತೇರಾ ಪಂಥ್ ಯುವಕರ ಪರಿಷತ್‌ನಿಂದ ಶಿಬಿರ

203 unit blood collection Mandya
Published on

ಮಂಡ್ಯ: ನಗರದ ಪೇಟೆಬೀದಿಯಲ್ಲಿರುವ ತೇರಾ ಪಂಥ್ ಸಭಾಭವನದಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ 203 ಯೂನಿಟ್ ರಕ್ತ ಸಂಗ್ರಹಿಸಲಾಯಿತು.

ಅಖಿಲ ಭಾರತೀಯ ತೇರಾ ಪಂಥ್ ಯುವಕರ ಪರಿಷತ್ ವತಿಯಿಂದ ವಿಶ್ವದ ಅತಿ ದೊಡ್ಡ ಅಭಿಯಾನ- ರಕ್ತದಾನ ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಶಿಬಿರದಲ್ಲಿ ಯುವಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು. ಬಳಿಕ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಗೆ ಹಸ್ತಾಂತರ ಮಾಡಲಾಯಿತು.

ಶಿಬಿರಕ್ಕೆ ಚಾಲನೆ ನೀಡಿದ ನಗರಸಭಾ ಸದಸ್ಯೆ ಪೂರ್ಣಿಮಾ ಮಾತನಾಡಿ, ರಕ್ತದಾನ ಮಹಾದಾನ. ಒಂದು ಯೂನಿಟ್ ರಕ್ತದಿಂದ ನಾಲ್ವರು ಜೀವ ಉಳಿಸುವ ಕಾರ್ಯ ರಕ್ತದಾನಿಗಳಿಂದ ಮಾತ್ರ ಸಾಧ್ಯ. ಆರ್ಥಿಕವಾಗಿ ನೆರವು ನೀಡುವಾಗ ಯಾರಿಗೆ ಕೊಡುತ್ತಿದ್ದೇವೆ ಎನ್ನುವುದು ಗೊತ್ತಾಗುತ್ತದೆ. ರಕ್ತದಾನ ಯಾರಿಗೂ ತಿಳಿಯದ ಸೇವಾಕಾರ್ಯವಾಗಿದೆ. ಆರೋಗ್ಯವಂತ ಮಹಿಳೆ ವರ್ಷಕ್ಕೆ 2 ಬಾರಿ, ಪುರುಷ 3 ಬಾರಿ ರಕ್ತದಾನ ಮಾಡಬಹುದು. ಹೆಚ್ಚು ರಕ್ತದಾನ ಮಾಡಿದ ಮಹಾರಕ್ತದಾನಿಗಳು ನಮ್ಮ ನಡುವೆ ಇದ್ದಾರೆ. ಅವರಿಗೆ ಗೌರವ ಸಮರ್ಪಿಸೋಣ, ತೇರಾ ಪಂಥ್ ಯುವಕರ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ಪರಿಷತ್ ಉಪಾಧ್ಯಕ್ಷ ಪ್ರವೀಣ್ ಮಾತನಾಡಿ, ವಿಶ್ವದಾದ್ಯಂತ 7,500 ರಕ್ತದಾನ ಶಿಬಿರಗಳು ನಡೆಯುತ್ತಿವೆ. ಹೈದರಬಾದ್‌ನಲ್ಲಿ 1ಲಕ್ಷ ಹಾಗೂ ಪ್ರಪಂಚದಲ್ಲಿ 5 ರಿಂದ 6 ಲಕ್ಷ ಯೂನಿಟ್ ರಕ್ತ ಸಂಗ್ರಹ ಗುರಿಯಿದೆ ಎಂದು ಮಾಹಿತಿ ನೀಡಿದರು.

ಪರಿಷತ್ ಅಧ್ಯಕ್ಷ ಸುರೇಶ್ ಬನ್ಸಾಲಿ, ಸ್ಥಾನಿಕ ಅಧ್ಯಕ್ಷ ಮದನ್‌ಲಾಲ್ ಜೈನ್, ಮೂರ್ತಿ ಪೂಜೆ ಸಂಘ ಅಧ್ಯಕ್ಷ ಪ್ರಕಾಶ್ ಜಿ ಕಂಠಾಣಿ, ಕಮಲೇಶ್, ರಾಕೇಶ್ ಬನ್ಸಾಲಿ, ಕಿರಣ್, ರೋಹಿತ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net