2024ರ ಲೆಕ್ಸ್ ಅಲ್ಟಿಮಾ ಕಾನೂನು ಸ್ಪರ್ಧೆ: ಎಸ್.ಸಹನಾ ಪ್ರಥಮ

2024ರ ಲೆಕ್ಸ್ ಅಲ್ಟಿಮಾ ಕಾನೂನು ಸ್ಪರ್ಧೆ: ಎಸ್.ಸಹನಾ ಪ್ರಥಮ
Published on

ಹಾಸನ: ಕಾನೂನು ವಿದ್ಯಾರ್ಥಿಗಳ ರಾಷ್ಟ್ರೀಯ ನ್ಯಾಯಾಲಯ ತೀರ್ಪು ಲೆಕ್ಸ್ ಅಲ್ಟಿಮಾ-2024 ಸ್ಪರ್ಧೆಯಲ್ಲಿ ಹಾಸನದ ಎಂ. ಕೃಷ್ಣ ಕಾನೂನು ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿನಿ ಎಸ್.ಸಹನಾ ಪ್ರಥಮ ಸ್ಥಾನ ಪಡೆದಿದ್ದಾರೆ.
ಮಂಗಳೂರಿನ ಎಸ್‌ಡಿಎಮ್ ಕಾನೂನು ಕಾಲೇಜಿನಲ್ಲಿ ಆಯೋಜಿಸಿದ್ದ ಲೆಕ್ಸ್ ಅಲ್ಟಿಮಾ ಸ್ಪರ್ಧೆಯಲ್ಲಿ ವಿವಿಧ ರಾಜ್ಯದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಒಂದು ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿ ಗ್ರಹಿಸಿ ಆ ಪ್ರಕರಣಕ್ಕೆ ಅನ್ವಹಿಸುವ ಕಾನೂನುಗಳ ಆಧಾರದ ಮೇಲೆ ನ್ಯಾಯಾಧೀಶರು ಪ್ರಕಟಿಸುವ ತೀರ್ಪಿನಂತೆ ವಿದ್ಯಾರ್ಥಿಗಳೂ ತೀರ್ಪು ನೀಡುವ ಸ್ಪರ್ಧೆಯಲ್ಲಿ ಎಸ್.ಸಹನಾ ಪ್ರಥಮ ಸ್ಥಾನ ಪಡೆದಿದ್ದು ರಾಷ್ಟ್ರ ಮಟ್ಟದ ಕಾರ್ಯಕ್ರಮದಲ್ಲಿ ಪ್ರಶಸ್ತಿಗೆ ಭಾಜನರಾಗಿದ್ದಕ್ಕೆ ಎಂ.ಕೃಷ್ಣ ಕಾಲೇಜು ಮಂಡಳಿ ಪ್ರಶಂಸೆ ವ್ಯಕ್ತಪಡಿಸಿದೆ. ಕಾನೂನು ವಿದ್ಯಾರ್ಥಿಗಳಲ್ಲಿ ಈ ರೀತಿಯ ಸ್ಪರ್ಧಾ ಮನೋಭಾವ ಹೆಚ್ಚಬೇಕು ಇದರಿಂದ ಅವರ ಮುಂದಿನ ವಕೀಲ ವೃತ್ತಿಗೆ ಅನುಕೂಲವಾಗುತ್ತದೆ ಎಂದು ಕಾಲೇಜು ಪ್ರಾಂಶುಪಾಲ ಡಾ. ವಿ.ಶ್ರೀನಿವಾಸ್ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಮ್ ಕಾಲೇಜು ಪ್ರಾಂಶುಪಾಲ ಡಾ. ತಾರಾನಾಥ ಪ್ರಶಸ್ತಿ ಪ್ರದಾನ ಮಾಡಿದರು. ಡಾ. ಸುಮಾ ಸುರೇಶ್ ಕೋಗಿಲಗಿರಿ, ಭಾರ್ಗವಿ ಸುಬ್ರಹ್ಮಣ್ಯ ಇತರರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net