

ಬೆಂಗಳೂರು: 2021-22ನೇ ಸಾಲಿನ ಆಯವ್ಯಯಕ್ಕೆ ಸಂಬಂಧಿಸಿದಂತೆ ಬುಧವಾರ ಆಡಳಿತಾಧಿಕಾರಿ ಗೌರವ್ ಗುಪ್ತಾ ಹಾಗೂ ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ಅಧ್ಯಕ್ಷತೆಯಲ್ಲಿ ಮಾಜಿ ಮೇಯರ್ ಗಳಿಂದ ಸಲಹೆ ಮತ್ತು ಸೂಚನೆ ಪಡೆಯಲು ಪಾಲಿಕೆ ಕೇಂದ್ರ ಕಚೇರಿಯಲ್ಲಿ ಸಭೆ ಏರ್ಪಡಿಸಲಾಗಿತ್ತು.
ಈ ವೇಳೆ ಮಾಜಿ ಮೇಯರ್ ಗಳಾದ ಲಕ್ಕಣ್ಣ, ಪದ್ಮಾವತಿ ಗಂಗಾಧರ ಗೌಡ, ಹುಚ್ಚಪ್ಪ, ಎಂ.ರಾಮಚಂದ್ರಪ್ಪ, ಕೆ.ಚಂದ್ರಶೇಖರ್, ಪಿ.ಆರ್.ರಮೇಶ್, ಮಮ್ತಾಜ್ ಬೇಗಂ, ಎಸ್.ಕೆ.ನಟರಾಜ್, ಬಿ.ಎಸ್.ಸತ್ಯನಾರಾಯಣ, ಬಿ.ಎನ್.ಮಂಜುನಾಥ ರೆಡ್ಡಿ, ಜಿ.ಪದ್ಮಾವತಿ, ಗಂಗಾಂಬಿಕೆ ಮಲ್ಲಿಕಾರ್ಜುನ್ ಹಾಜರಾಗಿದ್ದರು.
ವಿಶೇಷ ಆಯುಕ್ತರುಗಳಾದ ತುಳಸಿ ಮದ್ದಿನೇನಿ, ಡಿ.ರಂದೀಪ್, ಬಸವರಾಜು, ರಾಜೇಂದ್ರ ಚೋಳನ್ ಉಪಸ್ಥಿತರಿದ್ದರು.