ಜನಕ್ರಾಂತಿ ಸಮಾವೇಶಕ್ಕೆ ಜಿಲ್ಲೆಯಿಂದ 2 ಸಾವಿರ ಜನ

bbgd-1
ಅರವಿಂದ ಸಾಲವಾಡಗಿ
Published on

ಬಸವನಬಾಗೇವಾಡಿ: ಡಾ. ಬಿ. ಆರ್.  ಅಂಬೇಡ್ಕರ್ ಜಯಂತಿ ನಿಮಿತ್ತ ಕೋಮುವಾದಿ ಧಿಕ್ಕರಿಸಿ ಸಂವಿಧಾನ ರಕ್ಷಿಸಿ ದಲಿತರ ಅಭಿವೃದ್ಧಿಗಾಗಿ ಜನಕ್ರಾಂತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ವಿಜಯಪುರ ಜಿಲ್ಲಾ ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಅರವಿಂದ ಸಾಲವಾಡ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ದಲಿತ ಸಂಘರ್ಷ ಸಮಿತಿ ಏ. 23 ರಂದು ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಡಾ. ಬಾಬು ಜಗಜೀವನರಾಮ್ ಸಂಶೋಧನಾ ಕೇಂದ್ರ ಸುಮ್ನೆ ಹಳ್ಳಿ( ಸಿಗ್ನಲ್) ಯಲ್ಲಿ ಈ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮಕ್ಕೆ ವಿಜಯಪುರ ಜಿಲ್ಲೆಯಿಂದ ಅಂದಾಜು 2 ಸಾವಿರಕ್ಕೂ ಹೆಚ್ಚಿನ ಜನ ತೆರಳಲಿದ್ದಾರೆ ಎಂದು ತಿಳಿಸಿದರು.

ದಲಿತರ ವಿವಿಧ ಬೇಡಿಕೆಗಳ ಹಕ್ಕೊತ್ತಾಯಗಳನ್ನು ಮಂಡಿಸಲಾಗುವುದು. ರಾಜ್ಯದ ಎಲ್ಲ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಎಸ್. ಎಸ್ಟಿಗೆ ಮೀಸಲಿರಿಸಿದ ವ್ಯಾಪಾರ ಮಳೆಗೆಗಳನ್ನು ಠೇವಣಿ ಮತ್ತು ಮಾನಸಿಕ ಬಾಡಿಗೆ ಮೊತ್ತದಲ್ಲಿ ಶೇ.50 ರಷ್ಟು ರಿಯಾಯಿತಿ ನೀಡಬೇಕು. ಎಸ್ಸಿ, ಎಸ್‌ಟಿ ವರ್ಗದವರ ಸರಳ ಸಾಮೂಹಿಕ ವಿವಾಹಗಳಿಗೆ ನೀಡುತ್ತಿರುವ ಪ್ರೋತ್ಸಾಹ ಧನ 50 ಸಾವಿರ ರೂ. ಬದಲಿಗೆ ಲಕ್ಷದವರೆಗೆ ಹೆಚ್ಚಿಸಬೇಕು. ಭೂ ರಹಿತ ದೇವದಾಸಿ ಮತ್ತು ವಿಧವೆಯರಿಗೆ ತಲಾ ಕನಿಷ್ಠ 3 ಎಕರೆ ಜಮೀನು ಮಂಜೂರು ಮಾಡಬೇಕು. ಗುಡಿಸಲು ಮನೆಗಳು ಹಾಗೂ ಖಾಲಿ ನಿವೇಶನ ಹೊಂದಿರುವ ಬಡವರು ಮನೆ ಕಟ್ಟಿಕೊಳ್ಳಲು 6 ಲಕ್ಷ ರೂ. ನೀಡಬೇಕು ಸೇರಿ ವಿವಿಧ ಹಕ್ಕೊತ್ತಾಯಗಳನ್ನು ಮಂಡಿಸಲಾಗುವುದೆಂದು ತಿಳಿಸಿದರು.

ನಿಡಗುಂದಿ ತಾಲೂಕು ಸಂಚಾಲಕರು, ಮೌನೇಶ ಹೆಬ್ಬಾಳ, ಬಸವನಬಾಗೇವಾಡಿ ತಾಲೂಕು ಸಂಚಾಲಕರು, ಬಸಲಿಂಗಪ್ಪ ನಂದಿ ದೇವರಹಿಪ್ಪರಗಿ ಸಂಚಾಲಕರು ನಾಗೇಶ ಮ್ಯಾಗೇರಿ, ಕೋಲಾರ ಸಂಚಾಲಕರು, ಮಂಜುನಾಥ ಬಾಗಾನಗರ, ಹಣಮಂತ ಮ್ಯಾಗೇರಿ, ತಾಯಪ್ಪ ಮ್ಯಾಗೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net