ಅಥಣಿ ಪ್ರಗತಿಗೆ 2,000 ಕೋಟಿ ರೂ.

4
ಅಥಣಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಲಕ್ಷ್ಮಣ ಸವದಿ ಉದ್ಘಾಟಿಸಿದರು. ಶಿವಬಸವ ಸ್ವಾಮೀಜಿ, ಡಾ.ಎಂ.ಜಿ.ಹಂಜಿ. ಡಾ.ಬಿ.ಎಸ್.ಕಾಂಬಳೆ, ಮಾಜಿ ಶಾಸಕ ಶಹಜಹಾನ ಡೊಂಗರಗಾವ, ಕೆ.ಎಸ್.ನಿರುಪಮಾ ಇತರರಿದ್ದರು.
Published on

ಅಥಣಿ: ಅಧಿಕಾರ ಹಾಗೂ ಮಂತ್ರಿ ಪದವಿಗಾಗಿ ಯಾರ ಹಿಂದೆಯೂ ಅಲೆಯುವುದಿಲ್ಲ. ಅಧಿಕಾರದಲ್ಲಿದ್ದಾಗ ಜನಪರ ಕಾರ್ಯ ಅನುಷ್ಠಾನಗೊಳಿಸುವುದೇ ನನ್ನ ಗುರಿ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಪಟ್ಟಣದ ರಾಣಿ ಚನ್ನಮ್ಮ ವೃತ್ತದಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಪೌರಾಡಳಿತ ನಿರ್ದೇಶನಾಲಯದ ಸಂಯುಕ್ತಾಶ್ರಯದಲ್ಲಿ ಶನಿವಾರ ಆಯೋಜಿಸಿದ್ದ 116 ಕೋಟಿ ರೂ. ವೆಚ್ಚದ ಅಥಣಿ ಪಟ್ಟಣಕ್ಕೆ ನಿರಂತರ ಕುಡಿಯುವ ನೀರು ಪೂರೈಕೆ ಯೋಜನೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಪಟ್ಟಣದ ಜನಸಂಖ್ಯೆ 65 ಸಾವಿರಕ್ಕೂ ಹೆಚ್ಚಾಗಿದ್ದು, ನಿರಂತರ ಕುಡಿಯುವ ನೀರು ಪೂರೈಕೆಗೆ ಅಮೃತ 2.0 ಯೋಜನೆ ಅನುಷ್ಠಾನ ಅನಿವಾರ್ಯವಾಗಿದೆ. ಈ ಯೋಜನೆಯಡಿ 185 ಕಿಮೀ ಉದ್ದ ಪೈಪ್‌ಲೈನ್ ಅಳವಡಿಸಿ, ಐದು ಸ್ಥಳಗಳಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಿಸಿ 24 ಗಂಟೆ ಕಾಲ ಕುಡಿಯುವ ನೀರು ಪೂರೈಸಲಾಗುವುದು. ಇದೇ ಯೋಜನೆಯಡಿ ಪಟ್ಟಣದ ಸುತ್ತಮುತ್ತಲಿನ 2 ಕಿಮೀ ಅಂತರದಲ್ಲಿರುವ ತೋಟದ ಮನೆಗಳಿಗೂ ನೀರು ಪೂರೈಸಲಾಗುವುದು ಎಂದರು.

ಮುಖ್ಯಮಂತ್ರಿ ಮತ್ತು ಡಿಸಿಎಂ ಸಹಕಾರದಿಂದ ಅಮ್ಮಾಜೇಶ್ವರಿ ಏತ ನೀರಾವರಿಗೆ 1400 ಕೋಟಿ ರೂ., ಸತ್ತಿ ಮತ್ತು ದರೂರ ಸುತ್ತಮುತಲಿನ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆಗೆ 85 ಕೋಟಿ ರೂ., ಅಥಣಿ ಜೋಡು ಕೆರೆಗಳ ಅಭಿವೃದ್ಧಿಗೆ 25 ಕೋಟಿ ರೂ., ಪಶುವೈದ್ಯಕೀಯ ಕಾಲೇಜ್ ಅಭಿವೃದ್ಧಿಗೆ ಹೆಚ್ಚುವರಿಯಾಗಿ 82 ಕೋಟಿ ರೂ., ಅಥಣಿ ಹೊರವಲಯದ ಭಾಗೀರಥಿ ಹಳ್ಳ ಮತ್ತು ನಾಲಾ ಅಭಿವೃದ್ಧಿಗೆ 10 ಕೋಟಿ ರೂ. ಸೇರಿ ಅಥಣಿ ಕ್ಷೇತ್ರದ ಅಭಿವೃದ್ಧಿಗೆ 2000 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಮಾಹಿತಿ ನೀಡಿದರು.

ಡಾ.ಎಂ.ಜಿ.ಹಂಜಿ, ಉಪ ಕಾರ್ಯನಿರ್ವಾಹಕ ಅಭಿಯಂತ ಆರ್.ಕೆ.ಉಮೇಶ ಮಾತನಾಡಿದರು.

ಗುತ್ತಿಗೆದಾರ ಸಾಂಗಲಿಯ ಸಹ್ಯಾದ್ರಿ ಕನ್‌ಸ್ಟ್ರಕ್ಷನ್ಸ್‌ನ ಚಂದ್ರಕಾಂತ ನಲವಡೆ, ಪುರಸಭೆ ಮುಖ್ಯಾಧಿಕಾರಿ ಅಶೋಕ ಗುಡಿಮನಿ, ಸದಸ್ಯರಾದ ಬೇಬಿಜಾನ್ ಬೊಳಿ, ಕಲ್ಲಪ್ಪ ಮಡ್ಡಿ, ಸಂತೋಷ ಸಾವಡಕರ, ರಾಜು ಗುಡೊಡಗಿ, ದತ್ತಾ ವಾಸ್ಟರ್, ಭುವನೇಶ್ವರಿ ಯಂಕಂಚಿ, ಶಾಂತಾ ಲೋನಾರಿ, ಲತಾ ಭಜಂತ್ರಿ, ರಮೇಶ ಪವಾರ, ಬಸವರಾಜ ಪಾಟೀಲ, ಮಲ್ಲೇಶ ಹುದ್ದಾರ, ಮೃಣಾಲಿನಿ ದೇಶಪಾಂಡೆ, ರಿಯಾಜ್ ಸನದಿ, ವಿದ್ಯಾ ಬುಲಬುಲೆ, ಜುಲೆಖಾಬಿ ಖೇಮಲಾಪುರ, ವಿದ್ಯಾ ಹಳ್ಳದಮಳ, ಬಸವರಾಜ ನಾಯಿಕ, ಶ್ರೀಶೈಲ ಹಳ್ಳದಮಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net