ಅರಮನೆ ಮೈದಾನದಲ್ಲಿ 2 ಸಾವಿರ ಬೆಡ್​ವುಳ್ಳ ಕೋವಿಡ್​ ಆಸ್ಪತ್ರೆ

corona-missingweb
Published on

ಬೆಂಗಳೂರು: ಕೋವಿಡ್​ ಆಸ್ಪತ್ರೆಯಲ್ಲಿ ಬೆಡ್​ಗಳು ಖಾಲಿ ಇಲ್ಲ. ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಅವರಿಗೆಲ್ಲ ಸೂಕ್ತ ಚಿಕಿತ್ಸೆಗೆ ಕ್ರಮಕೈಗೊಳ್ಳುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಈ ನಡುವೆ ರಾಜ್ಯ ಸರ್ಕಾರ ರಾಜಧಾನಿಯ ಪ್ಯಾಲೇಸ್ ಗ್ರೌಂಡ್​ನಲ್ಲಿ 2 ಸಾವಿರ ಬೆಡ್​ಗಳ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದೆ.

ಬೆಡ್​ಗಳ ನಿರ್ಮಾಣ ಕಾರ್ಯ ಪೂರ್ಣಗೊಳಿಸಲು ಸಿಎಂ ಬಿ.ಎಸ್​. ಯಡಿಯೂರಪ್ಪ ಒಂದು ವಾರ ಗಡುವು ನೀಡಿದ್ದಾರೆ. ಶೀಘ್ರವೇ ಅರಮನೆ ಮೈದಾನದಲ್ಲಿ ಕೋವಿಡ್​ ಸೋಂಕಿತರಿಗೆ ಚಿಕಿತ್ಸಾ ಕಾರ್ಯ ಶುರುವಾಗಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಇದನ್ನೂ ಓದಿರಿ video/ ಕರೊನಾ ವಾರ್ಡಿನಲ್ಲಿ ‘ನರಕ’ ದರ್ಶನ, ಶೌಚಗೃಹದ ನೀರನ್ನೇ ಕುಡಿದ ಸೋಂಕಿತರು!

ಕೋವಿಡ್​ ಆಸ್ಪತ್ರೆಯಲ್ಲಿ ಬೆಡ್​ಗಳು ಖಾಲಿ ಇಲ್ಲ. ಕರೊನಾ ಸೋಂಕು ದೃಢಪಟ್ಟರೂ ಕೆಲವರನ್ನು ಆಸ್ಪತ್ರೆಗೆ ದಾಖಲಿಸಿಕೊಂಡಿಲ್ಲ ಎನ್ನುವ ದೂರುಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ. ಇದರ ಬೆನ್ನಲ್ಲೇ ಸರ್ಕಾರ, 2 ಸಾವಿರ ಬೆಡ್​ ನಿರ್ಮಾಣದ ಜತೆಗೆ ಟಾಯ್ಲೆಟ್ ನಿರ್ಮಾಣಕ್ಕೂ ಸೂಚನೆ ನೀಡಿದೆ ಎಂದು ತಿಳಿದು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net