ಲಿಂಗನಮಕ್ಕಿಗೆ 200 ಲಕ್ಷ ಮೀನು ಮರಿ

16sgr2
ಹಿನ್ನೀರು ಸೇರಿರುವ ಮೀನುಗಾರಿಕೆ ಇಲಾಖೆಯ ಕಾಟ್ಲ, ಗೌರಿ ಜಾತಿಯ ಮೀನಿನ ಮರಿಗಳು.
Published on

ಸಾಗರ: ಸಾಗರ ಮತ್ತು ಹೊಸನಗರ ತಾಲೂಕಿನ ಲಿಂಗನಮಕ್ಕಿ ಜಲಾಶಯದ ಹಿನ್ನೀರಿನ ನೈಸರ್ಗಿಕ ಕೆರೆಗಳಲ್ಲಿ 200 ಲಕ್ಷ ಕಾಟ್ಲ, ಗೌರಿ ಜಾತಿಯ ಅತಿ ಸಣ್ಣ ಮೀನುಗಳನ್ನು ಪಾಲನೆಗಾಗಿ ಬಿಡಲಾಗಿದೆ ಎಂದು ಸಾಗರ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ತಿಮ್ಮಪ್ಪ ತಿಳಿಸಿದ್ದಾರೆ.

ಲಿಂಗನಮಕ್ಕಿ ಜಲಾಶಯದ ಅಂಚಿನಲ್ಲಿರುವ ನೈಸರ್ಗಿಕ ಕರೆಗೆಳಲ್ಲಿ ಅತಿ ಸಣ್ಣ ಮೀನಿನ ಮರಿಗಳನ್ನು ಬಿಡಲಾಗಿದ್ದು ಈಗಾಗಲೇ ಬೇಸೂರು, ಮಳಲಿ, ಹಸಿರುಮಕ್ಕಿ, ಪಟಗುಪ್ಪ ಬಳಿ ಒಂದು ತಿಂಗಳಿAದ ಮೀನು ಮರಿಗಳನ್ನು ಪಾಲನೆಗೆ ಬಿಡಲಾಗಿದೆ. ಅವು ಬೆಳವಣಿಗೆ ಕಂಡ ನಂತರ ಮತ್ತೆ ಜಲಾಶಯಕ್ಕೆ ಮರಳಿ ಬಿಡಲಾಗುತ್ತದೆ'
ಮೀನುಗಾರರು ಮೇಯಿಂದ ಆಗಸ್ಟ್ವರೆಗೆ ಯಾರೂ ಕೆರೆಗಳಿಗೆ ಇಳಿದು ಮೀನುಗಳನ್ನು ಹಿಡಿಯದಂತೆ ಆದೇಶಿಸಲಾಗಿತ್ತು. ಈಗ ಮೀನು ಹಿಡಿಯಲು ಮುಕ್ತಗೊಳಿಸಲಾಗಿದೆ. ಮೀನುಗಾರರ ಪರವಾನಗಿಗಾಗಿ ಆಗಸ್ಟ್ನಲ್ಲಿ ಅವಕಾಶ ನೀಡಲಾಗಿದೆ. ಬರುವ ಮೇ 31 ರವರೆಗೆ ಈ ಪರವಾನಗಿ ಜಾರಿಯಲ್ಲಿರುತ್ತದೆ. ಈಗಾಗಲೇ 77 ಜನ ಮೀನುಗಾರರು ಪರವಾನಗಿಗೆ ಅರ್ಜಿ ಸಲ್ಲಿಸಿದ್ದು ಪ್ರಕ್ರಿಯೆ ನಡೆಯುತ್ತಿದೆ. ಮೀನುಗಾರರ ಕಾಲನಿಗಳಲ್ಲಿ ಸರ್ಕಾರದ ಅನುಕೂಲತೆಗಳ ಸಂಬAಽಸಿದAತೆ ಮಾಹಿತಿಗಳನ್ನೂ ನೀಡಲಾಗುತ್ತಿದೆ. ಪ್ರತಿ ವರ್ಷ ಇಲಾಖೆಯ ನಿಬಂಧನೆಗೆ ಒಳಪಟ್ಟಂತೆ ಆದ್ಯತೆಯ ಮೇಲೆ ಮೀನುಗಾರರಿಗೆ ಬಲೆ ಮತ್ತು ಉಕ್ಕುಡಗಳನ್ನು ವಿತರಿಸಲಾಗುತ್ತಿದ್ದು, ಆಶ್ರಯ ಮನೆಗಳಿಗೂ ಸಹಕಾರ ನೀಡಲಾಗುತ್ತಿದೆ. ಮೀನುಗಾರರು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಸೂಚಿಸಿದರು.

ಪ್ರತೀ ವರ್ಷ ಮೀನುಗಾರಿಕೆ ಇಲಾಖೆ ಸರ್ಕಾರದ ಅನುಕೂಲಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುತ್ತಿದೆ. ನಾನು ಪರವಾನಗಿಗಾಗಿ ಬುಧವಾರ ಅರ್ಜಿ ಸಲ್ಲಿಸಿದ್ದು ನಮ್ಮ ಭಾಗದ ನೈಸರ್ಗಿಕ ಕೆರೆಗಳಿಗೆ ಈಗಾಗಲೇ ಮೀನು ಮರಿಗಳನ್ನು ಬಿಡಲಾಗಿದೆ. ಮುಂಬರುವ ದಿನಗಳಲ್ಲಿ ಅದರ ಪ್ರಯೋಜನವನ್ನು ಪಡೆಯಲು ನಮಗೆ ಇಲಾಖೆ ಅನುವು ಮಾಡಿಕೊಡುತ್ತಿದೆ.|ನಾಗರಾಜ್ ಆಡುಗೋಡಿಮೀನುಗಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net