

ಕೊಲ್ಹಾರ: ರೈತರ ನಾನಾ ಬೇಡಿಕೆಗಳಿಗಾಗಿ ವಿವಿಧ ಸಂಟನೆಗಳಿಂದ ಸಚಿವ ಶಿವಾನಂದ ಪಾಟೀಲ ಮನೆ ಮುಂದೆ ಜ. 20ರಂದು ಅಹೋರಾತ್ರಿ ಧರಣಿ ನಡೆಸಲು ನಿರ್ಧರಿಸಲಾಗಿದೆ ಎಂದು ರೈತ ಸಂ, ಹಸಿರು ಸೇನೆ ತಾಲೂಕು ಅಧ್ಯ ಸೋಮು ಬಿರಾದಾರ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಲ್ಹಾರ ತಾಲೂಕಿಗೆ ಸಂಬಂಧಪಟ್ಟಂತೆ ನಾನಾ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸಚಿವ ಶಿವಾನಂದ ಪಾಟೀಲ ಅವರಿಗೆ ಅನೇಕ ಸಲ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಹೋರಾಟ ಚುರುಕುಗೊಳಿಸಲು ನಿರ್ಧರಿಸಲಾಗಿದೆ ಎಂದರು.
ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬು ನುರಿಸಲು ಆರಂಭಿಸಿ ಎರಡೂವರೆ ತಿಂಗಳಾದರೂ ರೈತರ ಕಬ್ಬಿನ ಬಿಲ್ ಪಾವತಿಸಿಲ್ಲ. ಟನ್ ಕಬ್ಬಿಗೆ 3400 ರೂ. ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದ್ದರು. ಆದರೆ ಕೆಲ ಕಾರ್ಖಾನೆಗಳು ಹಳೆ ಬಿಲ್ಲನ್ನೇ ಪಾವತಿಸುತ್ತಿದ್ದಾರೆ ಎಂದರು.
ತಾಲೂಕು ಕೇಂದ್ರವಾಗಿರುವ ಕೊಲ್ಹಾರದಲ್ಲಿ ತಾಲೂಕು ಕಚೇರಿಗಳನ್ನು ಆರಂಭಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲಮಾಡಿಕೊಡಬೇಕು ಎಂದು ಅವರು ಒತ್ತಾಯಿಸಿದರು.
ಸತೀಶ್ ಕುಳ್ಳೊಳ್ಳಿ, ಬಸವರಾಜ, ವಾಲಿಕಾರ, ಬಸವರಾಜ ನ್ಯಾಮಗೊಂಡ, ಗೋಪಾಲ ಕಾಖಂಡಕಿ, ಯಲ್ಲಪ್ಪ ಗುಳಗೊಂಡ, ಲಕ್ಷ$್ಮಣ ಬಿರಾದಾರ, ಮುದುಕಪ್ಪ ಚಲವಾದಿ, ಸಂಗಪ್ಪ ಗುಳಗೊಂಡ, ಶ್ರೀಶೈಲ ಬೆಣ್ಣೂರು ಉಪಸ್ಥಿತರಿದ್ದರು.