20 ದಿನದಲ್ಲಿ 843 ಮಿಮೀ ಮಳೆ

21 nrp 3
Published on

ಎನ್.ಆರ್.ಪುರ: ತಾಲೂಕಿನಲ್ಲಿ ಜುಲೈನಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದೆ. ಜು.1ರಿಂದ 20ರವರೆಗೆ 327 ಮಿಮೀ ವಾಡಿಕೆ ಮಳೆ ಆಗಬೇಕಾಗಿತ್ತು. ಆದರೆ 843 ಮಿಮೀ ಮಳೆ ಬಿದ್ದಿದ್ದು 516 ಮಿಮೀ ಹೆಚ್ಚುವರಿ ವರ್ಷಧಾರೆಯಾಗಿದೆ. </p><p>ಸೀತೂರು ಭಾಗದಲ್ಲಿ ಜನವರಿಯಿಂದ ಜು.21ರವರೆಗೆ 75.21 ಇಂಚು ಮಳೆ ಬಿದ್ದು ದಾಖಲೆಯಾಗಿದೆ. ಜು.1ರಿಂದ 21ರವರೆಗೆ 54 ಇಂಚು ಮಳೆಯಾಗಿದೆ. 2018ರಲ್ಲಿ ಜನವರಿಯಿಂದ ಜು.21ರವರೆಗೆ 95 ಇಂಚು ಮಳೆಯಾಗಿತ್ತು. ಡಿಸೆಂಬರ್​ವರೆಗೆ 137 ಇಂಚು ಮಳೆ ಬಿದ್ದು ದಾಖಲೆ ನಿರ್ವಿುಸಿತ್ತು. 1994ರಲ್ಲಿ ಜುಲೈನಲ್ಲಿ 59 ಇಂಚು ವರ್ಷಧಾರೆಯಾಗಿತ್ತು.</p><p>ಪ್ರಸಕ್ತ ಮಳೆಗಾಲದಲ್ಲಿ 53 ಮನೆಗಳಿಗೆ ಹಾನಿಯಾಗಿದೆ. ಇದರಲ್ಲಿ ಎರಡು ಮನೆ ಸಂಪೂರ್ಣ ಕುಸಿದಿದೆ. 28 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಉಳಿದ 23 ಮನೆಗಳಿಗೆ ಅಲ್ಪಸ್ವಲ್ಪ ಹಾನಿಯಾಗಿದೆ. ಜಿಪಂ ಇಂಜಿನಿಯರಿಂಗ್ ವಿಭಾಗದ ಮಾಹಿತಿ ಪ್ರಕಾರ 97.65 ಕಿಮೀ ರಸ್ತೆ ಹಾಳಾಗಿದೆ. ಇದರಿಂದ 12.23 ಕೋಟಿ ರೂ. ನಷ್ಟ ಸಂಭವಿಸಿದೆ. 14 ಸೇತುವೆಗಳಿಗೆ ಹಾನಿಯಾಗಿದ್ದು, 2.54 ಕೋಟಿ ರೂ. ನಷ್ಟ ಉಂಟಾಗಿದೆ. 4 ಕೆರೆ ಹಾಳಾಗಿದ್ದು 70 ಲಕ್ಷ ರೂ. ನಷ್ಟ ಸಂಭವಿಸಿದೆ. 5 ಸರ್ಕಾರಿ ಕಟ್ಟಡ ಹಾಳಾಗಿದ್ದು 5.60 ಲಕ್ಷ ರೂ. ನಷ್ಟ ಉಂಟಾಗಿದೆ. ಜು.19ರವರೆಗೆ 16.7 ಕೋಟಿ ರೂ. ನಷ್ಟ ಸಂಭವಿಸಿದೆ. ಮಳೆ ಅಬ್ಬರಕ್ಕೆ ಸೀತೂರು ಗ್ರಾಪಂನ ಅಜ್ರವಳ್ಳಿ-ಮಾವಿನಹಿತ್ತಲು ರಸ್ತೆ ಮಧ್ಯ ಜಲ ಉದ್ಭವವಾಗಿ ಕೆಸರುಮಯವಾಗಿದೆ. 20 ದಿನಗಳಿಂದ ನಿರಂತರ ಮಳೆಯಾಗಿದ್ದರಿಂದ ರಸ್ತೆಯಲ್ಲಿ ಜಲ ಉದ್ಭವಿಸಿ 100 ಮೀಟರ್ ರಸ್ತೆ ಸಂಪೂರ್ಣ ಕೆಸರುಮಯವಾಗಿದೆ. ಮಾವಿನಹಿತ್ತಲು, ಅಜ್ರವಳ್ಳಿಯಲ್ಲಿ 12 ಮನೆಗಳಿವೆ. ನಾಗರಮಕ್ಕಿ ಮುಖ್ಯ ರಸ್ತೆಯಿಂದ ಇಲ್ಲಿಗೆ 2 ಕಿಮೀ ದೂರವಾಗಲಿದ್ದು 3 ವರ್ಷಗಳ ಹಿಂದೆ ರಸ್ತೆಗೆ 1000 ಮೀಟರ್​ನಷ್ಟು ಜಲ್ಲಿ ಹಾಕಲಾಗಿದೆ. ಉಳಿದ 800ರಿಂದ 1000 ಮೀಟರ್ ರಸ್ತೆ ಹಾಗೇ ಉಳಿದಿದೆ. ಜಲ್ಲಿ ಹಾಕದ ರಸ್ತೆಯ ಎರಡೂ ಕಡೆ ಜಲ ಉಕ್ಕುತ್ತಿರುವುದರಿಂದ ರಸ್ತೆ ಕೆಸರುಗದ್ದೆಯಂತಾಗಿದೆ. 800 ಮೀಟರ್​ನಷ್ಟು ರಸ್ತೆಗೆ ಕಾಂಕ್ರೀಟ್ ಹಾಕಬೇಕು ಎಂಬುದು ಗ್ರಾಮಸ್ಥರ ಆಗ್ರಹ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net