ತಿಪಟೂರು: ತಾಲೂಕಿನ ನೊಣವಿನಕೆರೆ ಹೋಬಳಿ ಬಜಗೂರಿನ ರೈತ ಸುರೇಶ್ ಎಂಬವವರು ಮಾರಾಟಕ್ಕೆ ಸಿದ್ಧಪಡಿಸಿದ್ದ 20 ಚೀಲ ಕೊಬ್ಬರಿ ಕಳ್ಳತನವಾಗಿದೆ. ಇತ್ತೀಚೆಗೆ ಕೊಬ್ಬರಿ ಬೆಲೆಯಲ್ಲಿ ಏರಿಕೆ ಕಂಡಿದ್ದರಿಂದ 20 ಚೀಲ ಕೊಬ್ಬರಿಯನ್ನು ಮಾರಾಟಕ್ಕೆ ಸಿದ್ಧ ಮಾಡಿ ಶೆಡ್ನಲ್ಲಿ ಇಟ್ಟಿದ್ದರು. ಶುಕ್ರವಾರ ರಾತ್ರಿ ಕಳ್ಳರು ಈ ಶೆಡ್ನ ಬೀಗ ತೆಗೆದು ಕೊಬ್ಬರಿ ಕಳ್ಳತನ ಮಾಡಿದ್ದಾರೆ. ನೊಣವಿನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳ್ಳರ ಸುಳಿವು ಸಿಕ್ಕಿದ್ದು, ಸದ್ಯದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಠಾಣೆಯ ಪಿಎಸ್ಐ ಅಭಿಷೇಕ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.