20 ಗೌರವ ಹಾಗೂ 39 ವಾರ್ಷಿಕ ಪ್ರಶಸ್ತಿ ಪ್ರಧಾನ

3c0c5fda-a3ab-4ee8-9237-768a4f33d34b
Published on

ಬಾಗಲಕೋಟೆ: ಕರ್ನಾಟಕ ಬಯಲಾಟ ಅಕಾಡೆಮಿ ವತಿಯಿಂದ ಹಮ್ಮಿಕೊಂಡ 2021, 2022, 2023 ಹಾಗೂ 2024ನೇ ಸಾಲಿನ ರಾಜ್ಯ ಮಟ್ಟದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ 20 ಜನರಿಗೆ ಗೌರವ ಪ್ರಶಸ್ತಿ ಹಾಗೂ 39 ಜನರಿಗೆ ವಾರ್ಷಿಕ ಪ್ರಶಸ್ತಿಯನ್ನು ವಿಧಾನ ಪರಿಷತ್ ಶಾಸಕ ಪಿ.ಎಚ್.ಪೂಜಾರ ಪ್ರಧಾನ ಮಾಡಿದರು.

ನವನಗರದ ಕಲಾಭವನದಲ್ಲಿ ಸೋಮವಾರ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ 4 ವರ್ಷದ ಗೌರವ ಹಾಗೂ ವಾರ್ಷಿಕ ಪ್ರಶಸ್ತಿ ಸೇರಿ ಒಟ್ಟು 59 ಪುರಷ್ಕøತರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಪ್ರಶಸ್ತಿ ಪ್ರತಿ ಸಾಲಿಗೆ 5 ಜನರಿಗೆ ಗೌರವ ಪ್ರಶಸ್ತಿ ಹಾಗೂ 10 ಜನರಿಗೆ ವಾರ್ಷಿಕ ಪ್ರಶಸ್ತಿ ನೀಡಲಾಗುತ್ತಿದೆ. 2022ನೇ ಸಾಲಿನಲ್ಲಿ 9 ಜನರಿಗೆ ವಾರ್ಷಿಕ ಪ್ರಶಸ್ತಿ ನೀಡಲಾಯಿತು. ಗೌರವ ಪ್ರಶಸ್ತಿ 50 ಸಾವಿರ ರೂ, ನಗದು ಹಾಗೂ ಪ್ರಶಸ್ತಿ ಫಲಕ, ವಾರ್ಷಿಕ ಪ್ರಶಸ್ತಿಗೆ ತಲಾ 25 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಫಲಕ ನೀಡಲಾಯಿತು.

ಗೌರವ ಪ್ರಶಸ್ತಿ ಪುರಷ್ಕøತರು

2021ನೇ ಸಾಲಿನ ಅನುಸೂಯಾ ವಡ್ಡರ, ನರಸಪ್ಪ ಶಿರಗುಪ್ಪಿ, ವೀರಪ್ಪ ಬಿಸರಳ್ಳಿ, ಎಸ್.ಎ.ಕೃಷ್ಣಪ್ಪ, ಗೋವಿಂದಪ್ಪ ತಳವಾರ, 2022ನೇ ಸಾಲಿನ ಕೆ.ಮೌನಾಚಾರಿ, ಸುರೇಂದ್ರ ಹುಲ್ಲಂಬಿ, ಶತಕಂಠ ಮಲ್ಲೇಶಯ್ಯ, ಚಂದ್ರಮ್ಮ, ಅಶೋಕ ಸುತಾರ, 2023ನೇ ಸಾಲಿನ ಡಾ.ಡಿ.ಕೆ.ರಾಜೇಂದ್ರ, ಸಿದ್ರಾಮ ಸಾತಪ್ಪ ನಾಯಕ, ನಾರಾಯಣ ಪತ್ತಾರ, ಓಂಕಾರಮ್ಮ, ಕೆ.ಇಮಾಮ್‍ಸಾಬ. 2024ನೇ ಸಾಲಿನ ಎಚ್.ಎಂ.ಪಂಪಯ್ಯಸ್ವಾಮಿ, ಗಂಗಮ್ಮ, ಕೊಪ್ಪಳದ ತಿಮ್ಮಣ್ಣ ಚನ್ನದಾಸರ, ಈಶ್ವರಪ್ಪ ಹಲಗಣಿ, ಶಿವಣ್ಣ ಬಿರಾದಾರ.

ವಾರ್ಷಿಕ ಪ್ರಶಸ್ತಿ ಪುರಷ್ಕøತರು

2021ನೇ ಸಾಲಿನ ಸುಂದ್ರವ್ವ ಮೇತ್ರಿ, ಫಕೀರಪ್ಪ ಗೌರಕ್ಕನವರ, ಚಂದ್ರಶೇಖರ ಮೇಲಿನಮನಿ, ದುಂಡಪ್ಪ ಗುಡ್ಡಾ, ಚಂದ್ರಶೇಖರ ಗುರಯ್ಯನವರ, ಸುಶೀಲಾ ಮಾದರ, ಯಂಕೋಬ ಮುನಿಯಪ್ಪ, ಚಂದ್ರಪ್ಪ ಶರಣಪ್ಪ, ಎಂ.ಆರ್.ವಿಜಯ, ದಾನಪ್ಪ ಹಡಪದ, 2022ನೇ ಸಾಲಿನ ಮಲ್ಲಪ್ಪ ಗಣಿ, ಫಕೀರೇಶ ಬಿಸೆಟ್ಟಿ, ಕೆ.ನಾಗರತ್ನಮ್ಮ, ಕೆಂಪಣ್ಣ ಚೌಗಲಾ, ರಾಮಚಂದ್ರಪ್ಪ ಕಟ್ಟಿಮನಿ, ಅಂಬುಜಮ್ಮ, ಕೆ.ಪಿ.ಭೂತಯ್ಯ, ಜಿ.ರಾಮಪ್ರಭು, ಫಕೀರಪ್ಪ ನೆರ್ತಿ,

2023ನೇ ಸಾಲಿನ ಕೆ.ರಾಮಚಂದ್ರಪ್ಪ, ಕೃಷ್ಣಪ್ಪ ಪೂಜಾರ, ಕೆ.ಎಂ.ರಘುಪಾಲಯ್ಯ, ಮಲ್ಲೇಶಪ್ಪ ಭಜಂತ್ರಿ, ಅಮರೇಶ ತಿಮ್ಮಯ್ಯ, ಚಂದ್ರವ್ವ ನೀಲಪ್ಪನವರ, ಎಂ.ಬಡಪ್ಪ, À ರುದ್ರಪ್ಪ ಸಾಳುಂಕೆ, ಚುಕ್ಕನಕಲ್ಲು ರಾಮಣ್ಣ, ತಿಪ್ಪಣ್ಣ ದೊಡ್ಡೆಗೌಡ. 2024ನೇ ಸಾಲಿನ ಚಿತ್ರದುರ್ಗದ ಗುಗ್ ಮಲ್ಲಯ್ಯ, ಬೆಳಗಾವಿಯ ಭರಮಪ್ಪ ಸತ್ತೆನ್ನವರ, ದಾವಣಗೇರಿಯ ಬಾಲಮ್ಮ ಕಾಟಪ್ಪ, ವಿಜಯನಗರದ ಡಿ.ಎಂ.ಯರಿಸ್ವಾಮಿ, ಬಾಗಲಕೋಟೆಯ ಗ್ಯಾನಪ್ಪ ಮಾದರ, ತುಮಕೂರಿನ ಶಂಕರಪ್ಪ ಎ.ಬಿ, ವಿಜಯನಗರದ ಕೊಟ್ಗಿ ಹಾಲೇಶ್ವರ, ವಿಜಯಪುರದ ರುದ್ರಗೌಡ ಬಿರಾದಾರ, ಧಾರವಾಡದ ಚೆನ್ನವೀರಪ್ಪ ಮುದಲಿಂಗಣ್ಣವರ ಹಾಗೂ ಕೆ.ಹೊನ್ನೂರಸ್ವಾಮಿ ಅವರಿಗೆ ಪ್ರಶಸ್ತಿ ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ವಿಧಾನ ಪರಿಷತ್ ಶಾಸಕ ಪಿ.ಎಚ್.ಪೂಜಾರ ಅವರು ಯುವಕರು ನಮ್ಮ ದೇಶದ ನೆಲ, ಸಂಸ್ಕøತಿ ಎತ್ತಿ ಹಿಡಿಯುವ ಕೆಲಸವಾಗಬೇಕು. ನಮ್ಮ ದೇಶ ಕಲಾವಿದರಿಂದ ತುಂಬಿದ ಶ್ರೀಮಂತ ದೇಶವಾಗಿದ್ದು, ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸು ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕಿದೆ. ಆರ್ಥಿಕವಾಗಿ, ಸಾಮಾಜಿಕವಾಗಿ ಶ್ರೀಮಂತ ದೇಶ ಅಂತ ಹೇಳಲಿಕ್ಕೆ ಆಯಾ ಕಾಲದಲ್ಲಿ ಆಗಿ ಹೋದ ಶರಣರು, ಸಂತರು ಇವರೆಲ್ಲರೂ ಕಾರಣೀಬೂತರೆ ಆಗಿದ್ದಾರೆ. ಕೇಂದ್ರ ಸರಕಾರ ಸಹ ಕಲಾವಿದರಿಗೆ ಪ್ರೋತ್ಸಾಹಿಸುವ ಮೂಲಕ ಕಲೆಗಳನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಲಾಗುತ್ತಿದೆ ಎಂದರು.

ಇತ್ತೀಚೆಗೆ ಬಾಗಲಕೋಟೆಯ ಡಾ.ವೆಂಕಪ್ಪ ಸುಗತೇಕರ ಅವರಿಗೆ ಪ್ರಶಸ್ತ ಸಾಲಿನ ಪ್ರಶಸ್ತಿ ಪ್ರಶಸ್ತಿ ಪಡೆದುಕೊಂಡಿರುವುದು ಹೆಮ್ಮೆಯ ವಿಷಯವಾಗಿದೆ. ಕಲಾವಿದರು ತಮ್ಮ ಕಲೆಯ ಮೂಲಕ ಸಮಾಜಕ್ಕೆ ಕೊಡುಗೆ ನೀಡಿದವರು. 2017 ರಿಂದ ಪ್ರಾರಂಭವಾದ ರಾಜ್ಯ ಬಯಲಾಟ ಅಕಾಡೆಮಿ ಕಲಾವಿದರನ್ನು ಗುರುತಿಸಿ ಗೌರವಿಸುವ ಕೆಲಸ ಮಾಡುತ್ತಿದೆ. ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಕೇವಲ ಈ ಕಾರ್ಯ ಅಕಾಡೆಮಿಯದಲ್ಲ ನಮ್ಮೇಲ್ಲರದ್ದಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಅವರು ಪ್ರಶಸ್ತಿ ಪುರಷ್ಕøತರ ಮಾಹಿತಿ ಕೈಪಿಡಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು ಕಲಾವಿದರು ತಮ್ಮ ಬದುಕಿನ ಮುಕ್ಕಾಲು ಭಾಗ ಸಂಸ್ಕøತಿ ಪರಂಪರೆಯನ್ನು ಉಳಿಸುವ ಕೆಲಸವನ್ನು ಪ್ರಶಸ್ತಿ ಹಾಗೂ ಸನ್ಮಾನವನ್ನು ಆಶಿಸದೇ ಮಾಡುತ್ತಾ ಬಂದಿದ್ದಾರೆ. ಅವರ ಕಲಾಸೇವೆಗೆ ಬೆಳೆ ಕಟ್ಟಲು ಸಾಧ್ಯವಾಗುವದಿಲ್ಲ. ಜನಪದ ಲೋಕದಲ್ಲಿ ಪಲಾಪೇಕ್ಷೆಯಿಲ್ಲದೇ ಮುಂದುವರಿಸಿಕೊಂಡು ಬಂದಿದ್ದಾರೆ. ಬಯಲಾಟ ಅಕಾಡೆಯಿ ಕಲಾವಿದರ ದಾಖಲೀಕರಣ ಮಾಡಲು ಹೊರಟಿರುವುದು ಉತ್ತಮ ಕಾರ್ಯವಾಗಿದೆ. ಯಾಕೇಂದರೆ ಯಾವುದೇ ಒಂದು ಕಲೆಯನ್ನು ಮೌಖಿಕವಾಗಿ ಹೇಳಲಾಗುತ್ತಿತ್ತು. ಅವರ ಒಂದು ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ದಾಖಲೀಕರಣ ಅವಶ್ಯಕವಾಗಿದೆ ಎಂದರು.

ಪ್ರಾರಂಭದಲ್ಲಿ ಕರ್ನಾಟಕ ಬಯಲಾಟ ಅಕಾಡೆಮಿಯ ಅಧ್ಯಕ್ಷ ಕೆ.ಆರ್.ದುರ್ಗಾದಾಸ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಎಚ್.ಚನ್ನೂರ, ಕವಿ ಸತ್ಯಾನಂದ ಪಾತ್ರೋಟ, ದಾರವಾಡದ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಡಾ.ವೀರಣ್ಣ ರಾಜೂರ ಸೇರಿದಂತೆ ಅಕಾಡೆಮಿಯ ಸದಸ್ಯರು ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ ಜೈನಾಪೂರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net