ಪ್ರಕರಣ ವಿವರ: ಬಂಟ್ವಾಳ ತಾಲೂಕಿನ ನಿವಾಸಿ, 17ವರ್ಷದ ಅಪ್ರಾಪ್ತ ಬಾಲಕಿ ್ಯಾಷನ್ ಡಿಸೈನಿಂಗ್ ಕಲಿಯುತ್ತಿದ್ದಳು. ಈ ಸಂದರ್ಭ ಆಕೆಗೆ ಇನ್‌ಸ್ಟಾಗ್ರಾಂ ಮೂಲಕ ಕಾರು ಚಾಲಕ ಅಫ್ರಿದಿ ಎಂಬಾತನ ಪರಿಚಯವಾಗಿದೆ. ಆಕೆಯ ಜತೆ ಅನ್ಯೋನ್ಯತೆ ಬೆಳೆಸಿಕೊಂಡ ಆರೋಪಿಯು ಆಕೆಯ ಜತೆ ಪ್ರೀತಿಯ ನಾಟಕವಾಡಿದ್ದಲ್ಲದೆ, ಮದುವೆಯಾಗುವುದಾಗಿ ನಂಬಿಸಿದ್ದಾನೆ. 2024ರ ಮೇ 27ರಂದು ಬೆಳಗ್ಗೆ 11 ಗಂಟೆ ವೇಳೆಗೆ ಬಾಲಕಿಯೊಬ್ಬಳೇ ಬಾಡಿಗೆ ಮನೆಯಲ್ಲಿದ್ದಾಗ ಆರೋಪಿ ಆ ಮನೆಗೆ ತೆರಳಿ ಒತ್ತಾಯಿಸಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಈ ಕೃತ್ಯದ ವಿಡಿಯೋ ಮಾಡಿದ್ದಾಗಿ ಹೇಳಿ, ಇನ್ನು ಮುಂದಕ್ಕೆ ದೈಹಿಕ ಸಂಪರ್ಕಕ್ಕೆ ಸಹಕಾರ ನೀಡಬೇಕು. ಇಲ್ಲದಿದ್ದರೆ ವಿಡಿಯೋ ವೈರಲ್ ಮಾಡುತ್ತೇನೆ, ಜೀವ ಸಹಿತ ನಿನ್ನನ್ನು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದ. ಇದಾದ ನಂತರ ಪದೇ ಪದೇ ಅಪ್ರಾಪ್ತ ಬಾಲಕಿ ಜತೆ ನಿರಂತರ ಲೈಂಗಿಕ ಸಂಪರ್ಕ ಬೆಳೆಸಿದ್ದಾನೆ.