ಜಿಲ್ಲೆಯಲ್ಲಿ ಸಾಧ್ಯ 20 ಬಗೆಯ ಪ್ರವಾಸೋದ್ಯಮ

20 types of tourism are possible in the district
ಬೆಂಗಳೂರಿನ ವಿಧಾನ ಸೌಧದಲ್ಲಿ ಉತ್ತರ ಕನ್ನಡ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಅಧ್ಯಯನ ಸಮಿತಿ ಸಭೆ ಜರುಗಿತು. ಕಾನೂನು ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ, ಜಿಲ್ಲಾ ಸಮಿತಿಯ ಅಧ್ಯಕ್ಷ ಬೀರಣ್ಣ ನಾಯಕ ಮೊಗಟಾ, ದೀಪಾ ಛೋಳನ್, ಅಕ್ರಮ ಫಾಷಾ ಇತರರಿದ್ದರು.
Published on

ಯಲ್ಲಾಪುರ: ಬೆಂಗಳೂರಿನ ವಿಧಾನ ಸೌಧದಲ್ಲಿ ಉತ್ತರ ಕನ್ನಡ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಅಧ್ಯಯನ ಸಮಿತಿಯ ಸಭೆ ಕಾನೂನು ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಸಚಿವರು ಸಮಿತಿಯ ಅಂತಿಮ ವರದಿಯನ್ನು ಕೂಲಂಕಷವಾಗಿ ಪರಿಶೀಲಿಸಿ ಕೆಲವು ಸಲಹೆಗಳನ್ನು ನೀಡಿದರು. ಜಿಲ್ಲಾ ಸಮಿತಿಯ ಅಧ್ಯಕ್ಷ ಬೀರಣ್ಣ ನಾಯಕ ಮೊಗಟಾ ಮಾತನಾಡಿ, ಜಿಲ್ಲೆಯ ಮಾಮೂಲಿ ಪ್ರವಾಸಿ ತಾಣಗಳ ಹೊರತಾಗಿ ವಿವಿಧ ಇಪ್ಪತ್ತು ಬಗೆಯ ಪ್ರವಾಸೋದ್ಯಮದ ಸಾಧ್ಯತೆಯ ಕುರಿತು ವಿವರಿಸಿದರು. ಮಳೆಯ ನೆಪ ಮಾಡಿ ಜಲಪಾತಗಳನ್ನೊಳಗೊಂಡು ಅನೇಕ ಪ್ರವಾಸಿತಾಣಗಳಿಗೆ ಹೋಗದಂತೆ ನಿರ್ಭಂಧ ಹೇರಿರುವುದು ಸರಿಯಲ್ಲ. ಅವುಗಳನ್ನು ಆದಷ್ಟು ಬೇಗ ತೆರವುಗೊಳಿಸಬೇಕು’ ಎಂದು ಆಗ್ರಹಿಸಿದರು.

ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ದೀಪಾ ಚೋಳನ್, ಆಯುಕ್ತ ಅಕ್ರಮ್ ಪಾಷಾ, ಸಹ ನಿರ್ದೇಶಕಿ ಚೈತ್ರಾ ಬಿ.ಬಿ, ಸಮಿತಿಯ ಸದಸ್ಯರಾದ ಎಸ್.ಜಿ. ಹೆಗಡೆ ಬೆದೆಹಕ್ಲ, ವೇಣುಗೋಪಾಲ ಮದ್ಗುಣಿ, ಜಿ.ಎಂ. ತಾಂಡುರಾಯನ್ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net