20 ಲೀಟರ್ ಬೆಲ್ಲದ ಕೊಳೆ ವಶ

14blrp1
Published on

ಬೇಲೂರು: ತಾಲೂಕಿನ ಮಾದಾಪುರದಲ್ಲಿ ಕಳ್ಳಬಟ್ಟಿ ತಯಾರಿಸುತ್ತಿದ್ದ ಸ್ಥಳದ ಮೇಲೆ ಗುರುವಾರ ದಾಳಿ ನಡೆಸಿರುವ ಅಬಕಾರಿ ಅಧಿಕಾರಿಗಳು, 2 ಲೀಟರ್ ಕಳ್ಳಬಟ್ಟಿ ಹಾಗೂ 20 ಲೀ. ಬೆಲ್ಲದ ಕೊಳೆ ಹಾಗೂ ಪರಿಕರಗಳನ್ನು ವಶಕ್ಕೆ ಪಡೆದಿದ್ದಾರೆ.

ದಾಳಿ ಸಂದರ್ಭ ತಲೆಮರೆಸಿಕೊಂಡಿರುವ ಸಿದ್ದಯ್ಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಅಬಕಾರಿ ಅಧಿಕಾರಿಗಳು, ಆತನ ಪತ್ತೆಗಾಗಿ ಬಲೆ ಬೀಸಿದ್ದಾರೆ.

ದಾಳಿಯಲ್ಲಿ ಅಬಕಾರಿ ಉಪಅಧೀಕ್ಷಕ ವಿಜಯ್‌ಕುಮಾರ್, ನಿರೀಕ್ಷಕ ಕೇಶವಮೂರ್ತಿ, ಉಪ ನಿರೀಕ್ಷಕರಾದ ಸ್ವರ್ಣಶ್ರೀ, ರಂಜನ್, ಅಬ್ದುಲ್ ನಿಸಾರ್, ರಕ್ಷಕರಾದ ಗದಿಗೆಪ್ಪ, ಮಲ್ಲಿಕಾರ್ಜುನ, ರೋಹಿತ್, ಪ್ರತಾಪ್, ಇಮ್ರಾನ್, ವಿಶ್ವನಾಥ್, ಶಿವಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net