ಕಾರಿನಲ್ಲಿ ಸಾಗಿಸುತ್ತಿದ್ದ 20ಲಕ್ಷ ರೂ.ವಶ

cash jan 22 2020
Published on


ಕಾಸರಗೋಡು: ಚಿತ್ತಾರಿ ಸೇತುವೆ ಸನಿಹ ಕಾರಿನಲ್ಲಿ ಅನಧಿಕೃತವಾಗಿ ಸಾಗಿಸುತ್ತಿದ್ದ 20ಲಕ್ಷ ರೂ.ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ.

ಕಾಸರಗೋಡು ಅಡ್ಕತ್ತಬೈಲು ನಿವಾಸಿಗಳಾದ ಮೆಹಮೂದ್ ಕೆ.ಎ ಹಾಗೂ ಮಹಮ್ಮದ್ ಎಂ.ಎ ಬಂಧಿತರು. ಗುರುವಾರ ನಸುಕಿಗೆ ಕಾಞಂಗಾಡು ಡಿವೈಎಸ್‌ಪಿ ಪಿ.ಬಾಲಕೃಷ್ಣನ್ ನೇತೃತ್ವದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ ಕಾಳಧನವನ್ನು ವಶಪಡಿಸಿಕೊಳ್ಳಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಮಾದಕದ್ರವ್ಯ, ಕಾಳಧನ ವಿರುದ್ಧ ಕಾರ್ಯಾಚರಿಸಲು ರಚಿಸಲಾಗಿರುವ ’ಕ್ಲೀನ್ ಕಾಸರಗೋಡು’ಯೋಜನೆಯನ್ವಯ ಕಾರ್ಯಾಚರಣೆ ನಡೆಸಲಾಗಿದೆ. ಹಣವನ್ನು ಮಂಗಳೂರಿನಿಂದ ಪಡನ್ನಕ್ಕಾಡಿಗೆ ಸಾಗಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net