

ಹುಬ್ಬಳ್ಳಿ: ಕಂಪನಿಯೊಂದರಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಪಡೆಯಬಹುದೆಂದು ನಂಬಿಸಿದ ವಂಚಕರು, ಧಾರವಾಡದ ವ್ಯಕ್ತಿಯಿಂದ 20 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ.
ಮಲ್ಲಣ್ಣ ಎಂಬುವರು ವಂಚನೆಗೆ ಒಳಗಾಗಿದ್ದಾರೆ. ಜೆಫಾರಿ ಇಂಡಿಯನ್ ಲಿಮಿಟೆಡ್ ಕಂಪನಿ ಹೆಸರಿನಲ್ಲಿ ನಕಲಿ ವೆಬ್‌ಸೈಟ್ ತೆರೆದು ಅದರಲ್ಲಿ ವಾಟ್ಸ್‌ಆ್ಯಪ್ ಗ್ರೂಪ್ ಲಿಂಕ್ ಕಳುಹಿಸಿದ ವಂಚಕರು, ಹಣ ಹೂಡಿಕೆ ಮಾಡಿ ಲಾಭ ಗಳಿಸಿ ಎಂದಿದ್ದಾರೆ. ಇದನ್ನು ನಂಬಿದ ಮಲ್ಲಣ್ಣ, ಹಂತ ಹಂತವಾಗಿ 20 ಲಕ್ಷ ರೂ. ವರ್ಗಾಯಿಸಿದ್ದಾರೆ. ಹಣ ಮರಳಿ ಬಾರದೇ ಇದ್ದಾಗ ವಂಚನೆಗೆ ಒಳಗಾಗಿರುವುದ ಗೊತ್ತಾಗಿದ್ದು, ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.