

ಮದ್ದೂರು : ತಾಲೂಕಿನ ಬೂದಗುಪ್ಪೆ ಗ್ರಾಮದಲ್ಲಿ ಬೆಂಕಿ ಅವಘಡದಿಂದಾಗಿ ಮೇಕೆ ಸಾಕಣೆ ಮನೆ ಸುಟ್ಟಹೋಗಿದ್ದು, 20 ಮೇಕೆಗಳು ಸಜೀವ ದಹನವಾಗಿವೆ.
ಶುಕ್ರವಾರ ತಡರಾತ್ರಿ ಗ್ರಾಮದ ಗಿರೀಶ್ ಅವರ ಮೇಕೆ ಸಾಕಣೆ ಮನೆಗೆ ಬೆಂಕಿ ತಗುಲಿದೆ. ಪಕ್ಕದ ಮನೆಯ ವಾಸವಿದ್ದ ಗಿರೀಶ್ ಪಟ್ಟಣದ ಅಗ್ನಿ ಶಾಮಕ ಠಾಣೆಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು. ಅಷ್ಟರಲ್ಲಾಗಲೇ 20 ಮೇಕೆ ಸಜೀವ ದಹನವಾಗಿದ್ದವು. ಅಲ್ಲದೆ ಟಿಲ್ಲರ್ ಸೇರಿದಂತೆ ಕೃಷಿ ಯಂತ್ರೋಪಕರಣ ಬೆಂಕಿಗಾಹುತಿಯಾಗಿವೆ. ಮೇಕೆ ಸಾಕಣೆ ಮನೆ ಮನೆಯೂ ಭಸ್ಮವಾಗಿದೆ.
ಶನಿವಾರ ಬೆಳಗ್ಗೆ ಘಟನಾ ಸ್ಥಳಕ್ಕೆ ಪಟ್ಟಣದ ಪಶು ಸಹಾಯಕ ನಿರ್ದೇಶಕ ಡಾ.ಗೋವಿಂದ್ ಭೇಟಿ ನೀಡಿ, ಸಾವನ್ನಪ್ಪಿದ ಮೇಕೆಗಳ ಮರಣೋತ್ತರ ಪರೀಕ್ಷೆ ನಡೆಸಿದರು. ಪಿಡಿಓ ಬಸವರಾಜು, ಗ್ರಾಮ ಲೆಕ್ಕಾಧಿಕಾರಿ ಅಂಜನಪ್ಪ ಆಗಮಿಸಿ ಪರಿಶೀಲನೆ ನಡೆಸಿದರು.