ವಿಜಯಪುರದಲ್ಲಿ ಸಿಡಿಲು ಬಡಿದು 20 ಆಡು, ಕುರಿಗಾಹಿ ಸಾವು!

sidfi
Published on

ವಿಜಯಪುರ: ಬಿಸಿಲೂರಿನಲ್ಲಿ ಜಿಟಿಜಿಟಿ ಮಳೆ ಹಲವು ಅವಘಡಗಳಿಗೆ ಕಾರಣವಾಗಿದ್ದು, ಸಿಡಿಲು ಬಡಿದು ಆಡು ಮತ್ತು ಕುರಿಗಾಹಿ ಅಸುನೀಗಿರುವ ಹೃದಯವಿದ್ರಾವಕ ಘಟನೆ ನಡೆದಿದೆ.

ಬಬಲೇಶ್ವರ್ ತಾಲೂಕಿನ ಕಾಖಂಡಕಿ ಗ್ರಾಮದ ಜಮೀನೊಂದರಲ್ಲಿ ಬುಧವಾರ ಈ ಘಟನೆ ನಡೆದಿದ್ದು, ಅಮೋಘ ಸೋಮನಿಂಗ ಶಿವಣಗಿ( 38)

ಹಾಗೂ ಅವರ 20 ಆಡುಗಳು ಮೃತಪಟ್ಟಿವೆ.

ಕುರಿ ಕಾಯುತ್ತಾ ಜಮೀನಿಗೆ ತೆರಳಿದ್ದ ಸಂದರ್ಭ ಮಳೆಯ ಆರ್ಭಟ ಜೋರಾಗಿದೆ. ಮರದ ಕೆಳಗಡೆ ಆಡುಗಳೊಂದಿಗೆ ನಿಂತಿರಬೇಕಾದರೆ ಏಕಾಏಕಿ ಸಿಡಿಲು ಬಡಿದಿದೆ. ಜಿಲ್ಲಾದ್ಯಂತ ಜಿಟಿ ಜಿಟಿ ಮಳೆ ಸುರಿದಿದ್ದರಿಂದ ಜಲಮೂಲಗಳು ಚೇತರಿಸಿಕೊಂಡಿವೆ. ಜಮೀನಿನ ಒಡ್ಡುಗಳಲ್ಲಿ ನೀರು ಜಿನುಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net