ಗಾಳಿ, ಮಳೆಗೆ 20 ವಿದ್ಯುತ್ ಕಂಬ ಧರೆಗೆ

bhr rain-1
ಬಾಳೆಹೊನ್ನೂರು ಜೇಸಿ ವೃತ್ತದ ಬಳಿ ಮಳೆಗೆ ತ್ಯಾಜ್ಯ ಮುಖ್ಯರಸ್ತೆಯಲ್ಲಿ ಸಂಗ್ರಹವಾಗಿತ್ತು.
Published on

ಬಾಳೆಹೊನ್ನೂರು: ಬಾಳೆಹೊನ್ನೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶುಕ್ರವಾರ ಮಧ್ಯಾಹ್ನ ಹಾಗೂ ತಡರಾತ್ರಿ ಸುರಿದ ಭಾರಿ ಗಾಳಿ, ಮಳೆಗೆ ವಿವಿಧ ಗ್ರಾಮಗಳಲ್ಲಿ 20 ವಿದ್ಯುತ್ ಕಂಬಗಳು ಬಿದ್ದಿವೆ.

ಪಟ್ಟಣ, ಇಡಕಣಿ, ಆಡುವಳ್ಳಿ ಮುಂತಾದ ಕಡೆಗಳಲ್ಲಿ ಗಾಳಿ, ಮಳೆಗೆ ಮರಗಳು ಬಿದ್ದಿದ್ದರಿಂದ ವಿದ್ಯುತ್ ಕಂಬಗಳು ತುಂಡಾಗಿವೆ. ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಮೆಸ್ಕಾಂ ಸಿಬ್ಬಂದಿ ಶನಿವಾರ ಇಡೀ ದಿನ ವಿದ್ಯುತ್ ಲೈನ್ ಸರಿಪಡಿಸಿದ್ದಾರೆ ಎಂದು ಮೆಸ್ಕಾಂ ಜೆಇ ತಾಜ್ ಸಾಹೇಬ್ ತಿಳಿಸಿದ್ದಾರೆ.
ಹೋಬಳಿಯ ವಿವಿಧೆಡೆ ಶನಿವಾರ ಬೆಳಗಿನ ಜಾವ ಒಂದು ಗಂಟೆ ವೇಳೆಗೆ ಗುಡುಗು, ಸಿಡಿಲು ಅಬ್ಬರದೊಂದಿಗೆ ಆರಂಭವಾದ ಧಾರಾಕಾರ ಮಳೆ ಮುಂಜಾನೆ ಆರು ಗಂಟೆಯವರೆಗೂ ಸುರಿದಿದೆ. ಪಟ್ಟಣದ ಮುಖ್ಯರಸ್ತೆಗಳಲ್ಲಿ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೆ ಹಲವೆಡೆ ತ್ಯಾಜ್ಯ ರಸ್ತೆಯಲ್ಲೇ ಸಂಗ್ರಹವಾಗಿ ಸಂಚಾರಕ್ಕೆ ಅಡ್ಡಿಯಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net