ಸದಸ್ಯರಿಗೆ ಶೇ.20 ಲಾಭಾಂಶ ವಿತರಣೆ

14AINAPUR1
Published on

ಐನಾಪುರ: ಸಂಸ್ಥೆಯು ಪ್ರಸಕ್ತ ವರ್ಷ ಸದಸ್ಯರಿಗೆ ಶೇ. 20 ಲಾಭಾಂಶ ವಿತರಿಸಲಿದೆ. ಸುಮಾರು 1 ಕೋಟಿ ರೂ. ನಿವ್ವಳ ಲಾಭಗಳಿಸಿದೆ. ಸಂಸ್ಥೆ ಸಿಬ್ಬಂದಿ ಪ್ರಾಮಾಣಿಕ ಸೇವೆ ಹಾಗೂ ಸಂದ ಸದಸ್ಯರ ಸಹಕಾರದಿಂದಾಗಿ ಪ್ರಗತಿ ಕಾಣುತ್ತಿದೆ ಎಂದು ಐನಾಪುರ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂದ ಅಧ್ಯ ತಮ್ಮಣ್ಣ ಪಾರಶೆಟ್ಟಿ ಹೇಳಿದರು.

ಪಟ್ಟಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಂದ 120ನೆಯ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಸಂವು 3344 ಸದಸ್ಯರು, 2.70 ಕೋಟಿ ರೂ. ಷೇರು ಬಂಡವಾಳ, 21.50 ಕೋಟಿ ರೂ. ಠೇವಣಿ, 52.70 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದ್ದು, 33.44 ಕೋಟಿ ರೂ. ಸಾಲ ವಿತರಿಸಿದೆ. 98 ಲ ಲಾಭ ಪಡೆದಿದೆ. ಸಂದಿಂದ ವಿವಿಧ ಬಗೆಯ ಸಾಲ ವಿತರಿಸಲಾಗುತ್ತದೆ. ಪ್ರಸಕ್ತ ವರ್ಷದಲ್ಲಿ ನಿಧನರಾದ ಸದಸ್ಯರಿಗೆ 5 ಸಾವಿರ ರೂ. ವಿಮೆ, ಮಹಿಳೆಯರಿಗೆ ವಿಶೇಷ ಸಾಲ ನೀಡಲಾಗುವುದು ಎಂದರು.

ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಸಂದ ಸಿಇಒ ಮೃತ್ಯುಂಜಯ ಹಿರೇಮಠ ವರದಿ ಓದಿದರು. ಸಂದ ಉಪಾಧ್ಯ ಅಪ್ಪಾಸಾಬ ಪಾಟೀಲ, ರಾಜೇಂದ್ರ ಪೋದ್ದಾರ, ಅಣ್ಣಾಸಾಬ ಡೂಗನವರ, ಪ್ರವಿಣ ಕುಲಕರ್ಣಿ, ಕುಮಾರ ಅಪರಾಜ, ರಾಕೇಶ ಕಾರ್ಚಿ, ಅಣ್ಣೀಶ ಅಪರಾಜ, ಅಡಿವೆಪ್ಪ ಮಾದರ, ಲಕ್ಷಿ$್ಮಬಾಯಿ ರಡ್ಡಿ, ವರ್ಷಾ ಪಾಟೀಲ, ಸಿದ್ದಪ್ಪ ಕವಟಗೊಪ್ಪ, ಧರೆಪ್ಪ ಅಕಿವಾಟೆ, ಬಸವರಾಜ ಜಿರಗಾಳೆ, ಮಹಾದೇವ ವಡೆಯರ, ಅಭಜಿತ ಮಾನಗಾಂವೆ, ಅವಿನಾಶ ಡೂಗನವರು, ಶ್ರೀಕಾಂತ ಯಂಡೋಳ್ಳಿ, ಧರೆಪ್ಪ ಅಕಿವಾಟೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net