20.74 ಲಕ್ಷ ರೂ. ವರ್ಗಾಯಿಸಿಕೊಂಡು ವಂಚನೆ

cybe crime
Published on

ಹುಬ್ಬಳ್ಳಿ: ಐಎಚ್‌ಸಿಎಲ್ ಕಂಪನಿಯ ಎಚ್‌ಆರ್ ಎಂದು ಪರಿಚಯಿಸಿಕೊಂಡ ಅಪರಿಚಿತರು, ಹೊಟೇಲ್‌ಗಳಿಗೆ ಫೈವ್ ಸ್ಟಾರ್ ರೇಟಿಂಗ್ ನೀಡಿ ಮನೆಯಲ್ಲಿ ಕುಳಿತು ಹಣ ಗಳಿಸಬಹುದೆಂದು ನಂಬಿಸಿ ನಗರದ ವ್ಯಕ್ತಿಯೊಬ್ಬರಿಂದ ಬರೋಬ್ಬರಿ 20.74 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ.
ನಗರದ ಚಿರಂಜೀವಿ ವಂಚನೆಗೆ ಒಳಗಾದವರು. ಅನುಷಾ ಶರ್ಮಾ ಐಎಚ್‌ಸಿಎಲ್ ಎಂಬ ಹೆಸರಿನ ವಾಟ್ಸ್ ಆ್ಯಪ್ ಖಾತೆ ಮೂಲಕ ಪರಿಚಯಿಸಿಕೊಂಡ ಅಪರಿಚಿತರು, ಟೆಲಿಗ್ರಾಮ್ ಗ್ರೂಪ್ ಮೂಲಕ ಟಾಸ್ಕ್ ನೀಡಿ ಮೊದಲು ಲಾಭಾಂಶ ಕೊಟ್ಟಿದ್ದಾರೆ. ನಂತರ 20.74 ಲಕ್ಷ ಹೂಡಿಕೆ ಮಾಡಿಸಿಕೊಂಡು ವಂಚಿಸಿದ್ದಾರೆ. ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net