20.35 ಲಕ್ಷ ರೂ.ನಗದು ವಶ

500 rs note
Published on

ಚಿತ್ರದುರ್ಗ:ನಗರದ ಹೊರವಲಯ ಪಿಳ್ಳೇಕೆರನಹಳ್ಳಿ ಚೆಕ್‌ಪೋಸ್ಟ್ ಬಳಿ ಸೂಕ್ತ ದಾಖಲೆ ಇಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ 20.35ಲಕ್ಷ ರೂ.ಗಳನ್ನು ಎಸ್‌ಎಸ್‌ಟಿ ಹಾಗೂ ಎಫ್‌ಎಸ್‌ಟಿ ತಂಡದವರು ಮಂಗಳವಾರ ಮಧ್ಯಾಹ್ನ ವಶಪಡಿಸಿಕೊಂಡಿದ್ದಾರೆ. ಹೊಸಪೇಟೆಯಿಂದ ಚಿತ್ರದುರ್ಗದೆಡೆ ಬರುತ್ತಿದ್ದ ಕಾರನ್ನು ತಡೆದು ಪರಿಶೀಲಿಸಿದಾಗ ಅಗತ್ಯ ದಾಖಲೆಗಳಿಲ್ಲದೆ ಇದ್ದ ಹಣವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ತಹಸೀಲ್ದಾರ್ ಡಾ. ನಾಗ ವೇಣಿ,ಗ್ರಾಮಾಂತರ ಠಾಣೆ ಪಿಐ ಸುನೀಲ್‌ಕುಮಾರ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net