

ಹುಬ್ಬಳ್ಳಿ: ಜಾಹೀರಾತು ಲಿಂಕ್‌ಗಳಿಗೆ ಲೈಕ್ಸ್ ಮತ್ತು ಸ್ಟಾರ್ ರೇಟಿಂಗ್ ನೀಡಿದರೆ ಹೆಚ್ಚು ಲಾಭ ಗಳಿಸಬಹುದೆಂದು ನಂಬಿಸಿದ ವಂಚಕರು, ನಗರದ ವ್ಯಕ್ತಿಯೊಬ್ಬರಿಂದ ಬರೋಬ್ಬರಿ 20.05 ಲಕ್ಷ ರೂಪಾಯಿ ವರ್ಗಾಯಿಸಿಕೊಂಡು ವಂಚಿಸಿದ್ದಾರೆ.
ನಿಜಾಮುದ್ದೀನ್ ಎಂಬುವರು ವಂಚನೆಗೆ ಒಳಗಾಗಿದ್ದಾರೆ. ಅಪರಿಚಿತರು ಮೊಬೈಲ್ ಫೋನ್‌ಗೆ ಸಂದೇದ ಲಿಂಕ್ ಕಳುಹಿಸಿ ನಂಬಿಸಿದ್ದಾರೆ. ನಂತರ ಆತನ ಖಾತೆಯಿಂದ ಹಂತ ಹಂತವಾಗಿ 20.05 ಲಕ್ಷ ರೂಪಾಯಿ ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.