

ಕಲಬುರಗಿ: ನವಜಾತ ಶಿಶುಗಳ ಎಲ್ಲ ರೀತಿಯ ರೋಗಗಳಿಗೆ ಸುಮಾರು ಎರಡು ಸಾವಿರ ನವಜಾತ ಶಿಶುಗಳಿಗೆ ಶಸ್ತç ಚಿಕಿತ್ಸೆ ಮಾಡಿ, ಗುಣಮುಖ ಮಾಡಲಾಗಿದೆ ಎಂದು ಅನ್ವಿಕಾ ನವಜಾತ ಶಿಶು ಮಕ್ಕಳ ಆಸ್ಪತ್ರೆಯ ಡಾ.ಶರಣ ಗುಬ್ಬಿ ತಿಳಿಸಿದರು.
ಏಳನೇ ತಿಂಗಳಲ್ಲಿ ಜನಿಸಿದ ಮಕ್ಕಳು, ತೂಕ ಕಡಿಮೆ ಸೇರಿ ಇತರ ಸಮಸ್ಯೆಯಿಂದ ಜನಿಸಿದ ಮಗುವಿನ ಶಸ್ತç ಚಿಕಿತ್ಸೆಗೆ ನೀಡಲಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಗುಣಮಟ್ಟದ ಸಾಧನೆ ಮಾಡಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆಸ್ಪತ್ರೆಯಲ್ಲಿ ಹೃದಯ ಸಮಸ್ಯೆ ಹೊರತುಪಡಿಸಿ ಎಲ್ಲ ರೋಗಗಳಿಗೆ ಉತ್ಕೃಷ್ಟ ಗುಣಮಟ್ಟದ ಚಿಕಿತ್ಸೆ ನೀಡಲಾಗುತ್ತಿದೆ. ನವಜಾತ ಶಿಶುಗಳಲ್ಲಿ ಅನ್ನನಾಳದ ಸಮಸ್ಯೆ, ಗುದದ್ವಾರ ಇಲ್ಲದಿರುವುದು, ಅತಿ ರಕ್ತಸ್ರಾವ, ಅವಧಿಗಿಂತ ಮುನ್ನ ಜನನ ಸೇರಿ ಹಲವು ಸಮಸ್ಯೆಗೆ ಶೇ.೯೦ ಯಶಸ್ವಿ ಚಿಕಿತ್ಸೆ ನೀಡಲಾಗಿದೆ. ಕಲ್ಯಾಣ ಕರ್ನಾಟಕದ ಜನರು ಉಚಿತ ಶಸ್ತç ಚಿಕಿತ್ಸೆ ಲಾಭ ಪಡೆಯಬೇಕು ಎಂದರು.
ಡಾ.ಜಯರಾಜ ಮಾತನಾಡಿ, ತೂಕ ಕಡಿಮೆ ಇರುವ ಮಕ್ಕಳು ಉಳಿಯುದಿಲ್ಲ ಎಂಬ ಮನಸ್ಥಿತಿ ಇದೆ. ಆದರೆ ಅನ್ವೀಕಾ ಆಸ್ಪತ್ರೆಯೂ ಇದಕ್ಕೆ ಶಾಶ್ವತ ಪರಿಹಾರ ನೀಡಿದೆ. ಕಳೆದ ಐದು ವರ್ಷದಿಂದ ಎರಡು ಸಾವಿರ ಮಕ್ಕಳಿಗೆ ಉತ್ತಮ ಆರೋಗ್ಯ ನೀಡಲಾಗಿದೆ ಎಂದರು.
ಡಾ.ಪ್ರಫುಲ್ಲ ಗುಬ್ಬಿ ಇದ್ದರು.