2 ಸಾವಿರ ಗಡಿ ದಾಟಿದ ಕರೊನಾ

carona logo
Published on

ಗದಗ: ಜಿಲ್ಲೆಯಲ್ಲಿ ಶುಕ್ರವಾರ ಕರೊನಾ ಶತಕ ಬಾರಿಸಿದ್ದು, 105 ಜನರಿಗೆ ಸೋಂಕು ತಗುಲಿದೆ.

ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 2071ಕ್ಕೆ ಏರಿಕೆಯಾಗಿದೆ. ಇದರಲ್ಲಿ 958 ಜನ ಗುಣವಾಗಿದ್ದು, 1058 ಸಕ್ರಿಯ ಕೇಸ್ ಗಳಿವೆ. ಶುಕ್ರವಾರ ಮೂವರು ಸೇರಿ ಜಿಲ್ಲೆಯಲ್ಲಿ ಇಲ್ಲಿಯವರೆಗೆ 45 ಜನ ಮೃತಪಟ್ಟಿದ್ದಾರೆ.

ಸೋಂಕು ದೃಢಪಟ್ಟ ಪ್ರದೇಶಗಳು:

ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯ ಕುರಟ್ಟಿಪೇಟೆ, ಗದಗ, ಜಿಮ್ಸ್ ಕ್ವಾರ್ಟರ್ಸ್, ಶರಣಬಸವೇಶ್ವರನಗರ, ಸಚ್ಚಿದಾನಂದಮಠ ಆದರ್ಶನಗರ, ಗಣೇಶನಗರ, ಮುಳಗುಂದ ಕೆ.ಇ.ಬಿ.ಕ್ವಾರ್ಟರ್ಸ್ , ಪಂಚಾಕ್ಷರಿನಗರ, ಎನ್.ಬಿ.ಪಾಟೀಲ ಹಾಸ್ಪಿಟಲ್, ಮಾಬೂಸುಬಾನಿಕಟ್ಟಿ, ರಾಜೀವಗಾಂಧಿನಗರ, ಸಂಭಾಪುರ ರಸ್ತೆ, ಮುಳಗುಂದ ನಾಕಾ, ಎ.ಪಿ.ಎಂ.ಸಿ. ಯಾರ್ಡ್, ವಿವೇಕಾನಂದನಗರ,

ತಾಲೂಕಿನ ಲಕ್ಕುಂಡಿ, ಶಿರುಂಜ, ಮಹಾಲಿಂಗಪುರ ತಾಂಡಾ, ತಿಮ್ಮಾಪುರ, ಕಳಸಾಪುರ.

ನರಗುಂದ ಪಟ್ಟಣದ ಅಧ್ಯಾಪಕನಗರ, ಗುಡ್ಡದಕೇರಿ ಓಣಿ, ಕಸಬಾ ಓಣಿ, ರಾಚಯ್ಯನಗರ, ತಾಲೂಕಿನ ಬೆನಕೊಪ್ಪ, ಕಲ್ಲಾಪುರ, ಶಿರೋಳ ಓಣಿ ಬೆಳವಣಕಿ, ಹದ್ಲಿ, ಶಿರೋಳ, ದಂಡಾಪುರ, ಸುರಕೋಡ, ಕೊಣ್ಣೂರು, ಶಿರೋಳ ತಾಂಡಾ.

ರೋಣ ಪಟ್ಟಣದ ಲಿಂಗನಗೌಡ್ರ ಓಣಿ, ರೋಣ ತಾಲೂಕಿನ ಅಸೂಟಿ, ಯರೇಬೇಲೇರಿ, ದುರ್ಗದಬೈಲ ಹೊಳೆಆಲೂರು, ಗಾಡಗೋಳಿ, ಮಣ್ಣೂರು, ಬೆಳವಣಕಿ, ನರೇಗಲ್, ಜಕ್ಕಲಿ, ಮಲ್ಲಾಪುರ, ಯಾವಗಲ್, ಸೂಡಿ.

ಮುಂಡರಗಿ ಪಟ್ಟಣದ ಮುಂಡರಗಿ, ಕೋಟೆಬಾಗ, ತಾಲೂಕಿನ ಕಡಕೋಳ, ಚಿಕ್ಕವಡ್ಡಟ್ಟಿ, ಜಾಲವಾಡಗಿ, ಹಿರೇವಡ್ಡಟ್ಟಿ, ಬಾಗೇವಾಡಿ, ಎಸ್.ಆರ್.ಕೆ.ತಾಂಡಾ.

ಶಿರಹಟ್ಟಿ ಪಟ್ಟಣದ ವಿಠ್ಠಲಮಂದಿರ ಹತಿರದ ಮಾರ್ಕೆಟ್ ಪ್ರದೇಶ, ತಾಲೂಕಿನ ಶಿಗ್ಲಿ, ಬನ್ನಿಕೊಪ್ಪ, ಮಾಗಡಿ,ಸೂರಣಗಿ.

ಲಕ್ಷ್ಮೇಶ್ವರ ಪಟ್ಟಣದ ಬಸಾಪುರ ಓಣಿ, ಪೇಟೆಬನ.

ಗಜೇಂದ್ರಗಡ ಪಟ್ಟಣದ ಪೊಲೀಸ್ ಸ್ಟೇಷನ್, ಬಸವೇಶ್ವರ ನಗರ, ಕುಂಬಾರ ಓಣಿ, ಭೂಮರಡ್ಡಿ ಪ್ಲಾಟ್, ಜವಳಿ ಪ್ಲಾಟ್ ಪ್ರದೇಶದಲ್ಲಿ ಕರೊನಾ ಸೋಂಕು ಪತ್ತೆಯಾಗಿದೆ.

ಮೃತರ ವಿವರ:

ಗದಗ ನಂದೀಶ್ವರ ನಗರ ನಿವಾಸಿ 76 ವರ್ಷದ ಮಹಿಳೆ, ಕೆ.ಸಿ ರಾಣಿ ರಸ್ತೆ ನಿವಾಸಿ 54 ವರ್ಷದ ಮಹಿಳೆ ಹಾಗೂ ರೋಣ ತಾಲೂಕಿನ ಹೊಳೆಆಲೂರ ನಿವಾಸಿ 61 ವರ್ಷದ ಪುರುಷ ಕರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಸುಂದರೇಶಬಾಬು ತಿಳಿಸಿದ್ದಾರೆ.

ಕರೊನಾ ಅಂಶಗಳು

105: ಇಂದಿನ ಸೋಂಕಿತರು

26396: ನಿಗಾದಲ್ಲಿ ಇರುವವರು:

27122: ಮಂದಿಯ ಗಂಟಲ್ ದ್ರವ ಸಂಗ್ರಹ

1058: ಆಸ್ಪತ್ರೆಯಲ್ಲಿ ಐಸೋಲೇಷನ್ ನಲ್ಲಿ ಇರುವವರು:

2071: ಪಾಸಿಟಿವ್ ಪ್ರಕರಣಗಳು

968: ಬಿಡುಗಡೆಯಾದವರು:

1058: ಸಕ್ರಿಯ ಪ್ರಕರಣಗಳು

496: ಬಾಕಿ ಇರುವ ವರದಿಗಳು:

24555: ನೆಗೆಟಿವ್ ಮಾದರಿಗಳು

45: ಮೃತರು

EndFragment

ತಾಲೂಕುವಾರು ವಿವರ

ಗದಗ 960

ಮುಂಡರಗಿ 240

ನರಗುಂದ 238

ರೋಣ 292

ಶಿರಹಟ್ಟಿ 287

ಬೆನಕನಕೊಪ್ಪ ಕೇಂದ್ರಕ್ಕೆ ಸೌಲಭ್ಯ ಕಲ್ಪಿಸಲು ಮನವಿ

ನರಗುಂದ: ತಾಲೂಕಿನ ಬೆನಕನಕೊಪ್ಪ ಗ್ರಾಮದಲ್ಲಿ ಕೋವಿಡ್ ಕೇರ್ ಸೆಂಟರ್​ನಲ್ಲಿ ಸೋಂಕಿತರಿಗೆ ಗುಣಮಟ್ಟದ ಆಹಾರ ಹಾಗೂ ಮೂಲಸೌಲಭ್ಯ ಕಲ್ಪಿಸಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ಶಿರಸ್ತೇದಾರ್ ರೇಣುಕಾ ಚಿಗದನ್ನವರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

‘ಬೆನಕನಕೊಪ್ಪ ಕೋವಿಡ್-19 ಆಸ್ಪತ್ರೆಗೆ ದಾಖಲಾಗಿರುವ ಕರೊನಾ ಸೋಂಕಿತರಿಗೆ ಸರಿಯಾದ ಬೆಡ್​ಗಳ ವ್ಯವಸ್ಥೆ ಇಲ್ಲ. ಅವರಿಗೆ ಗುಣಮಟ್ಟದ ಆಹಾರ ನೀಡುತ್ತಿಲ್ಲ. ಸ್ವಚ್ಛತೆಯಾಗಲಿ, ಬಿಸಿ ನೀರಿನ ವ್ಯವಸ್ಥೆ ಇಲ್ಲ. ಇವೆಲ್ಲ ಮೂಲ ಸೌಲಭ್ಯಗಳನ್ನು ತಾಲೂಕು ಅಥವಾ ಜಿಲ್ಲಾಡಳಿತದಿಂದ ಕಲ್ಪಿಸಿಕೊಡಬೇಕು ಎಂದು ತಿಳಿಸಿದರು.

ಮಹೇಶ ಕೊಳ್ಳಿಯವರ, ಶರಣಪ್ಪ ಸೊಬರದ, ಪ್ರಸಾದ ಮುತ್ತಿನ, ಹನುಮಂತಗೌಡ ಭರಮಗೌಡ್ರ, ವಿಕಾಸ ಶೆಟ್ಟಿ, ನೀಲಕಂಠಗೌಡ ಪಾಟೀಲ, ಮಂಜು ಮಾಲಗಿತ್ತಿ, ಮಹಾಂತೇಶ ಸುರಕಟ್ಟಿ, ಶರಣಪ್ಪ ಪೂಜಾರ, ಸಂದೀಪ ಪಾಟೀಲ, ಸಚೀನ ರಾಜಮನಿ, ಶಿವು ಪಾಟೀಲ, ಪವನ ಕಲ್ಲೂರ, ಬಸು ಅಂಗಡಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net