2 ಲಕ್ಷರೂ. ನಗದು, ವಜ್ರದ ನೆಕ್ಲೆಸ್ ಕಳವು

udp-theft
Published on

ಅರಸೀಕೆರೆ : ಮನೆಯ ಬೀಗ ಮುರಿದು ಒಳ ನುಗ್ಗಿದ ಕಳ್ಳರು 2 ಲಕ್ಷರೂ. ನಗದು, ವಜ್ರದ ನೆಕ್ಲೆಸ್ ಕಳವು ಮಾಡಿರುವ ಘಟನೆ ನಗರದ ಮಿನಿ ವಿಧಾನ ಸೌಧದ ಹಿಂಭಾಗ ಮನೆಯಲ್ಲಿ ನಡೆದಿದೆ.

ನಗರದ ನಿವಾಸಿ ರಾಜಣ್ಣ ಅವರು, ಸೆ.30 ರಂದು ಮಧ್ಯಾಹ್ನ ಕುಟುಂಬ ಸಮೇತರಾಗಿ 4 ದಿನಗಳ ಕಾಲ ಗೋವಾ ಪ್ರವಾಸಕ್ಕೆ ಹೋಗಿದ್ದು, ಮನೆಯ ಕಾಂಪೌಂಡ್ ಕೀಯನ್ನು ಪಕ್ಕದ ಮನೆಯ ಸುಮಾ ಅವರಿಗೆ ನೀಡಿ ಹೋಗಿದ್ದರು. ಅ.1 ರಂದು ಬೆಳಿಗ್ಗೆ ಸುಮಾ ಅವರು ಹೂ ಬಿಡಿಸಿಕೊಳ್ಳಲು ಗೇಟ್‌ನ್ನು ತೆಗೆದು ಹೋದಾಗ ಮನೆಯ ಮುಂಬಾಗಿಲನ್ನು ತೆಗೆದಿತ್ತು. ಒಳಹೋಗಿ ನೋಡಿದಾಗ ಯಾರೂ ಇಲ್ಲದೇ ಇದ್ದರಿಂದ ಕರೆ ಮಾಡಿ ಮಾಹಿತಿ ನೀಡಿದ್ದರು. ಪ್ರವಾಸ ಮುಗಿಸಿಕೊಂಡು ಬುಧವಾರ ಬಂದು ನೋಡಿದಾಗ ಬೀರುವಿನಲ್ಲಿಟ್ಟಿದ್ದ 10 ಗ್ರಾಂ ತೂಕದ 75 ಸಾವಿರ ಬೆಲೆಬಾಳುವ ಡೈಮೆಂಡ್ ನೆಕ್ಲೆಸ್, 2 ಲಕ್ಷರೂ. ನಗದು ಕಳವು ಮಾಡಿಕೊಂಡು ಹೋಗಿರುವುದು ಪತ್ತೆಯಾಗಿದೆ. ಈ ಬಗ್ಗೆ ರಾಜಣ್ಣ ಅವರು ಅರಸೀಕೆರೆ ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net