2 ಲಕ್ಷ ರೂ. ಮೌಲ್ಯದ ಆಭರಣ ವಶಕ್ಕೆ

2807KLB13
Published on

ಕಲಬುರಗಿ: ರೈಲ್ವೆಯಲ್ಲಿ ಕಳ್ಳತನವಾಗಿದ್ದ ವಿವಿಧ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಕಳ್ಳರನ್ನು ಪೊಲೀಸರು ಬಂಧಿಸಿದ್ದು, ಬಂಧಿತರಿಂದ ೨.೦೬ ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ. ಸೊಲ್ಲಾಪುರದ ಲಿಂಬೇವಾಡಿಯ ಅಂಬಾದಾಸ ಜಾಧವ್ (೨೬), ಸಮರ್ಥ ಚವ್ಹಾಣ್ (೨೯) ಬಂಧಿತರು. ಬಂಧಿತರಿಂದ ೨೦ ಗ್ರಾಂ ಬಂಗಾರದ ಚೈನ್, ೧೨ ಗ್ರಾಂನ ಚೈನ್ ವಶಕ್ಕೆ ಪಡೆದಿದ್ದಾರೆ. ವಾಡಿ ಪೊಲೀಸ್ ಠಾಣೆಯಲ್ಲಿ ೨೦೨೩ರಲ್ಲಿ ಪ್ರಕರಣ ದಾಖಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net