

ಬೇಲೂರು: ಬೇಲೂರಿನ ಶ್ರೀ ಚನ್ನಕೇಶವಸ್ವಾಮಿ ದೇಗುಲದಲ್ಲಿದ್ದ 11 ಹುಂಡಿಗಳನ್ನು ಸಿಸಿ ಕ್ಯಾಮರಾಗಳ ಕಣ್ಗಾವಲಿನಲ್ಲಿ ಶನಿವಾರ ಪಟ್ಟಣದ ಶಾಂತಲಾ ವಿದ್ಯಾಸಂಸ್ಥೆ ವಿದ್ಯಾರ್ಥಿಗಳು ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕ್ ಸಿಬ್ಬಂದಿ ಹಾಗೂ ದೇಗುಲ ವ್ಯವಸ್ಥಾಪನಾ ಸಮಿತಿ ಸದಸ್ಯರ ಸಮ್ಮುಖದಲ್ಲಿ ತೆರೆಯಲಾಯಿತು.
ಕಳೆದ ವರ್ಷ ನವೆಂಬರ್ 4, 2022ರಲ್ಲಿ 5 ತಿಂಗಳ ಅವಧಿಯಲ್ಲಿ 35,21,878 ರೂ. ಆದಾಯ ಬಂದಿತ್ತು. ಎರಡು ತಿಂಗಳ ನಂತರ ಜನವರಿ 6, 2023 ರಂದು ಮತ್ತೆ ಹುಂಡಿಗಳನ್ನು ತೆರೆದು ಎಣಿಕೆ ಮಾಡಿದ ಸಂದರ್ಭ 19,45,740 ರೂ. ಆದಾಯ ಬಂದಿದೆ. ಎರಡು ತಿಂಗಳಲ್ಲಿ ದೇಗುಲಕ್ಕೆ ಲಕ್ಷಾಂತರ ಪ್ರವಾಸಿಗರು ಮತ್ತು ಭಕ್ತರು ಆಗಮಿಸಿದ್ದರಿಂದ ಹುಂಡಿಯಲ್ಲಿ ಹೆಚ್ಚಿನ ಹಣ ಸಂಗ್ರಹವಾಗಲು ಕಾರಣವಾಗಿದೆ.
ದೇಗುಲದ ಇಒ ವಿದ್ಯುಲತಾ, ಪ್ರಧಾನ ಅರ್ಚಕ ಶ್ರೀನಿವಾಸ್ ಭಟ್ಟರ್, ನರಸಿಂಹಪ್ರಿಯ ಭಟ್, ವ್ಯವಸ್ಥಾಪನ ಅಧ್ಯಕ್ಷ ಡಾ.ನಾರಾಯಣಸ್ವಾಮಿ, ಸದಸ್ಯರಾದ ರವಿಶಂಕರ್, ಪ್ರಮೋದ್, ಮೋಹನ್, ವಿಜಯಲಕ್ಷ್ಮಿ, ಸುಧಾ, ರಮೇಶ್, ಶಾಂತಳಾ ವಿದ್ಯಾ ಸಂಸ್ಥೆ ವಿದ್ಯಾರ್ಥಿಗಳು ಹಾಗೂ ದೇಗುಲದ ಸಿಬ್ಬಂದಿ ಇದ್ದರು.