2 ಕೋಟಿ ರೂ. ವೆಚ್ಚದ ಎಸ್.ಸಿ, ಎಸ್.ಟಿ. ಹಾಸ್ಟೆಲ್ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಚ್.ಪಿ. ಸ್ವರೂಪ್ ಚಾಲನೆ

2
Published on

ಹಾಸನ: ನಗರದ ಆಕಾಶವಾಣಿ ಹಿಂಬಾಗ ಇರುವ ಎಸ್.ಸಿ., ಎಸ್.ಟಿ. ಪೋಸ್ಟ್ ಮೆಟ್ರಿಕ್ ಬಾಲಕರ ವಿದ್ಯಾರ್ಥಿನಿಲಯದಲ್ಲಿ ಎರಡು ಕೋಟಿ ರೂ. ವೆಚ್ಚದ ಹೆಚ್ಚುವರಿ ಕೊಠಡಿಗಳು, ಊಟದ ಹಾಲ್, ಅಡುಗೆ ಮನೆ ಸೇರಿದಂತೆ ಹೆಚ್ಚುವರಿ ಅಭಿವೃದ್ಧಿ ಕಾಮಗಾರಿಗೆ ಗುರುವಾರ ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್ ಅವರು ಭೂಮಿ ಪೂಜೆ ಮಾಡುವುದರ ಮೂಲಕ ಚಾಲನೆ ನೀಡಿದರು.

ನಂತರ ಮಾಧ್ಯಮದೊಂದಿಗೆ ಮಾತನಾಡಿ, ಹೆಚ್ಚುವರಿ 6 ಕೊಠಡಿ ಮತ್ತು ಡೈನಿಂಗ್ ಹಾಲ್ ನಿರ್ಮಾಣಕ್ಕಾಗಿ ಭೂಮಿ ಪೂಜೆಯನ್ನು ಮಾಡಲಾಗಿದೆ. ಶೀಘ್ರದಲ್ಲಿಯೇ ಕಾಮಗಾರಿ ಮುಗಿಸಿ ಹಾಸ್ಟೆಲ್ ಮಕ್ಕಳಿಗೆ ಅನುಕೂಲ ಮಾಡಿಕೊಡಲಾಗುವುದು. 2 ಕೋಟಿ ರೂ.ನಲ್ಲಿ ಈಗಾಗಲೇ 1 ಕೋಟಿ ರೂ ಬಿಡುಗಡೆ ಆಗಿದ್ದು, ಉಳಿದ ಹಣವು ಕೂಡ ಶೀಘ್ರದಲ್ಲಿಯೇ ಬಿಡುಗಡೆ ಆಗಲಿದೆ. ಹಾಸ್ಟೆಲ್ ನಲ್ಲಿ ಇರುವ ಸಮಸ್ಯೆಗಳ ಬಗ್ಗೆ ಅಪರ ಜಿಲ್ಲಾಧಿಕಾರಿ ಶಾಂತಲಾ ಅವರು ಕೂಡ ಕುಂದುಕೊರತೆ ನೋಡಿದ್ದು, ನಾವು ಕೂಡ ವೀಕ್ಷಣೆ ಮಾಡಲಾಗಿದೆ ಎಂದರು.

ಮುಂದಿನ ವಾರದಲ್ಲಿ ಮಕ್ಕಳ ಜತೆ ಸಮಾಲೋಚನೆ ಮಾಡಿ, ಏನೆನೂ ಅನಾನುಕೂಲ ವಿದೆ ಎಲ್ಲ ಸರಿಪಡಿಸುವ ಕೆಲಸ ಮಾಡಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು. ಡ್ರೈನೇಜ್ ಕೂಡ ಹಾಳಾಗಿದ್ದು, ಸರಿಪಡಿಸುವ ಕೆಲಸ ಮಾಡಲಾಗುವುದು ಎಂದು ಹೇಳಿದರು.

ಇದೆ ವೇಳೆ ಜೆಡಿಎಸ್ ಮುಖಂಡ ದೊಡ್ಡಗದವನಹಳ್ಳಿ ಕುಮಾರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮನುಕುಮಾರ್, ಕೆ.ಆರ್.ಡಿ.ಎಲ್. ಸಹಾಯಕ ಕಾರ್ಯಪಾಲಕ ಅಭಿಯಾಂತರರು ಅಣ್ಣಪ್ಪ, ಸಹಾಯಕ ಕಾರ್ಯಪಾಲಕಭಿಯಂತರರು ನವ್ಯಶ್ರೀ, ಜೆಡಿಎಸ್ ಜಿಲ್ಲಾ ಮಾಧ್ಯಮ ವಕ್ತಾರರಾದ ರಘು ಹೊಂಗೆರೆ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net