2 ವರ್ಷದ ಹನ್ವಿಕಾ ಸೂಪರ್ ಟ್ಯಾಲೆಂಟೆಡ್ ಕಿಡ್

gan (1)
Published on

ಕುಂದಾಪುರ: ಎರಡು ವರ್ಷದ ಬಾಲೆ ಹನ್ವಿಕಾ ಎಸ್.ದೇವಾಡಿಗ ಅಪರೂಪದ ಸಾಧನೆಯೊಂದಿಗೆ ವಿಶ್ವ ಹಾಗೂ ರಾಜ್ಯಮಟ್ಟದಲ್ಲಿ ‘ಸೂಪರ್ ಟ್ಯಾಲೆಂಟೆಡ್ ಕಿಡ್’ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾಳೆ.

ಪಡುಕೋಣೆ ಮೂಲದ ಬೆಂಗಳೂರಿನಲ್ಲಿ ವಾಸವಿರುವ ಸಚೀಂದ್ರ ಆರ್.ದೇವಾಡಿಗ ಹಾಗೂ ಶ್ವೇತಾ ದೇವಾಡಿಗರ ಪುತ್ರಿ ಹನ್ವಿಕಾ ಎಸ್.ದೇವಾಡಿಗ 1 ವರ್ಷ 6 ತಿಂಗಳು ಇರುವಾಗಲೇ 15 ವಿಭಾಗಗಳಲ್ಲಿ ಸಾಧನೆ ವಾಡಿ ಇಂಟರ್‌ನ್ಯಾಶನಲ್ ವರ್ಲ್ಡ್ ಎಕ್ಸಲೆನ್ಸ್ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ ಪಡೆದಿದ್ದು, ಇದೀಗ ಕರ್ನಾಟಕ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ ಪಡೆದಿದ್ದಾಳೆ.

ಪುಟಾಣಿಯ ಸಾಧನೆ

ಹನ್ವಿಕಾ 30ಕ್ಕೂ ಹೆಚ್ಚು ತರಕಾರಿಗಳನ್ನು ಗುರುತಿಸುವುದು, 40ಕ್ಕೂ ಹೆಚ್ಚು ಪ್ರಾಣಿ, 20ಕ್ಕೂ ಹೆಚ್ಚು ವಾಹನಗಳು, 30 ಹಣ್ಣುಗಳು, 11 ಮೇಕಪ್ ಉತ್ಪನ್ನಗಳು, 30 ಪಕ್ಷಿಗಳು, 9 ವಿವಿಧ ಬಟ್ಟೆಗಳನ್ನು ಗುರುತಿಸುವುದು, 10 ರೀತಿಯ ಭಾವನೆಗಳನ್ನು ವ್ಯಕ್ತಪಡಿಸುವುದು, 100ಕ್ಕಿಂತ ಜಾಸ್ತಿ ಶಬ್ದವನ್ನು ಪುನರಾವರ್ತಿಸುವುದು, ಅ-ಅಃ, ಎ-ಝಡ್ ಪುನರಾವರ್ತಿಸಿ ದಾಖಲೆ ವಾಡಿದ್ದಾಳೆ. ಅಲ್ಲದೆ ಇಷ್ಟು ಚಿಕ್ಕ ವಯಸ್ಸಲ್ಲಿ ಯಾರೂ ಎತ್ತದ ಭಾರವನ್ನು ಎತ್ತಿದ ಮಗು ಎಂಬ ಸಾಧನೆಯನ್ನೂ ಮಾಡಿದ್ದಾಳೆ.

ಸಣ್ಣ ವಯಸ್ಸಿನಲ್ಲಿ ಹನ್ವಿಕಾ ನಮ್ಮ ಜೊತೆ ವಾಡುತ್ತಿದ್ದ ಸಂವಹನ ಪ್ರಕ್ರಿಯೆ, ಆಕೆಯ ಗ್ರಹಿಕಾ ಸಾಮರ್ಥ್ಯ ಕಂಡು ನಾವು ಅಚ್ಚರಿಯಾದೆವು. ಅವಳ ಸಾಧನೆಗೆ ಇಡೀ ಕುಟುಂಬ ಪ್ರೋತ್ಸಾಹಿಸಿತು. ಹೀಗಾಗಿ ಅವಳಿಗಿದ್ದ ವಿಶೇಷ ಸಾಮರ್ಥ್ಯಕ್ಕೆ 1 ವಷ 9 ತಿಂಗಳೊಳಗೆ ಎರಡು ಪ್ರಮುಖ ಪ್ರಶಸ್ತಿಗಳು ದೊರಕಿರುವುದು ಸಂತಸವಾಗಿದೆ. ಶ್ವೇತಾ ದೇವಾಡಿಗ, ಮಗುವಿನ ತಾಯಿ ಮಗಳು ಹನ್ವಿಕಾ ಇಷ್ಟು ಚಿಕ್ಕ ವಯಸ್ಸಿಗೆ ವಿಶ್ವ ಮತ್ತು ರಾಜ್ಯ ಪ್ರಶಸ್ತಿ ಪಡೆದಿರುವುದಕ್ಕೆ ಹೆಮ್ಮೆಯಾಗುತ್ತದೆ. ಅವಳ ಅರ್ಹತೆ ಗಮನಿಸಿ ಇಂಟರ್‌ನ್ಯಾಷನಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಮತ್ತು ಕರ್ನಾಟಕ ಬುಕ್ ಆಫ್ ರೆಕಾರ್ಡ್ಸ್ ಹೋಲ್ಡರ್ ಎಂಬ ಎರಡು ಪ್ರಶಸ್ತಿ ಪಡೆದು ವಿಶ್ವ ದಾಖಲೆ ವಾಡಿರುವುದು ನಿಜಕ್ಕೂ ನಮ್ಮ ಕುಟುಂಬಕ್ಕೆ ಹೆಮ್ಮೆಯ ಸಂಗತಿ. ಸಚೀಂದ್ರ ಆರ್. ದೇವಾಡಿಗ (ಹನ್ವಿಕಾ ತಂದೆ) https://www.vijayavani.net/semaphore-festival-at-nitte-college https://www.vijayavani.net/sanjivini-products-mp-kota

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net