2 ಟಿಎಂಸಿ ನೀರು ಹರಿಸುವಂತೆ ಮನವಿ

25HNL2-Mohammad Roshan
Published on

ಬೆಳಗಾವಿ: ಜಿಲ್ಲೆಯ ಜನರಿಗೆ ನೀರಿನ ತೊಂದರೆಯಾಗದಂತೆ ಕೃಷ್ಣಾ ನದಿಗೆ 2 ಟಿಎಂಸಿ ನೀರು ಹರಿಸುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಪತ್ರ ಬರೆಯಲು ಪ್ರಾದೇಶಿಕ ಆಯುಕ್ತರಿಗೆ ಮನವಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್​ ರೋಷನ್​ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕುರಿತು ಬೃಹತ್​ ಮತ್ತು ಸಣ್ಣ ನೀರಾವರಿ ಇಲಾಖೆಯೊಂದಿಗೆ ಚರ್ಚಿಸಿದ್ದೇವೆ. ಸದ್ಯ ಬೆಳಗಾವಿಯಲ್ಲಿ ನೀರಿನ ಕೊರತೆಯಿಲ್ಲ. ನೀರಿನ ಅಭಾವ ಉಂಟಾಗುವ ಗ್ರಾಮಗಳ ಪಟ್ಟಿ ಮಾಡಲು ಆದೇಶಿಸಲಾಗಿದೆ. ಸಮಸ್ಯೆಯುಂಟಾದಲ್ಲಿ ಖಾಸಗಿ ಬೋರ್​ವೆಲ್​ ಅಥವಾ ಟ್ಯಾಂಕರ್​ ಮೂಲಕ ನೀರು ಸರಬರಾಜು ಮಾಡಲು ತಹಸೀಲ್ದಾರ್​ರಿಗೆ ಸೂಚಿಸಲಾಗಿದೆ. ಕುಡಿಯುವ ನೀರಿನ ಸಮಸ್ಯೆಯಾಗದಂತೆ ಹಿಡಕಲ್​ ಜಲಾಶಯದಿಂದ ಬಾಗಲಕೋಟೆಗೆ 2 ಟಿಎಂಸಿ ನೀರನ್ನು ಈಗಾಗಲೇ ಬಿಡಲಾಗಿದೆ. ಟಪ್ರಭೆಯ ಎಡ&ಬಲದಂಡೆ ಕಾಲುವೆಗಳಿಗೂ 2 ಟಿಎಂಸಿ ನೀರು ಈಗ ಬಿಡಲಾಗುತ್ತಿದೆ ಎಂದರು.

ಕಳೆದ ಬಾರಿ ಕಬ್ಬಿನ ಬಾಕಿ ಬಿಲ್​ನ್ನು ಕಾರ್ಖಾನೆಗಳು ಪಾವತಿಸಿವೆ. ಕಬ್ಬು ನಿಯಂತ್ರಣ ಕಾಯ್ದೆಯಡಿ ಕಬ್ಬು ಸಾಗಣೆಯಾದ 15 ದಿನದೊಳಗೆ ಬಿಲ್​ ಬೆಳೆಗಾರರಿಗೆ ಪಾವತಿಸಬೇಕು. ಕಾನೂನು ಪಾಲಿಸದ ಕಾರ್ಖಾನೆಗಳಿಗೆ ಈಗಾಗಲೇ ನೋಟಿಸ್​ ಸಹ ಜಾರಿ ಮಾಡಲಾಗಿದೆ. ಎಲ್ಲ ಕಾರ್ಖಾನೆಗಳು ಬಾಕಿ ಬಿಲ್​ ನೀಡುವುದಾಗಿ ತಿಳಿಸಿವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net