ಕಿಡ್ನಿ ಕಸಿಗೆ ನೆರವು ನೀಡಲು ಯುವಕನ ಮನವಿ

17MND-5
Published on

ವಿಜಯವಾಣಿ ಸುದ್ದಿಜಾಲ ಮಂಡ್ಯ
ಎರಡೂ ಕಿಡ್ನಿಗಳ ವೈಫಲ್ಯದಿಂದ ಬಳಲುತ್ತಿರುವ ಯುವಕ ನೆರವಿಗೆ ಮನವಿ ಮಾಡಿದ್ದಾನೆ.
ತಾಲೂಕಿನ ಕೊತ್ತತ್ತಿ ಗ್ರಾಮದ ವಿನೋದ್‌ಕುಮಾರ್(28) ಎರಡೂ ಕಿಡ್ನಿ ವೈಫಲ್ಯದಿಂದ ವಾರಕ್ಕೆ ಮೂರು ಬಾರಿ ಡಯಾಲಿಸಿಸ್
ಮಾಡಿಸಬೇಕಾಗಿದೆ. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರತಿ ವಾರ ಆರೇಳು ಸಾವಿರ ರೂ. ವೆಚ್ಚ ತಗುಲುತ್ತಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅಳಲು ತೋಡಿಕೊಂಡರು.
ತಾಯಿ ಕೂಲಿ ಕೆಲಸ ಮಾಡುತ್ತಿದ್ದು, ಚಿಕಿತ್ಸಾ ವೆಚ್ಚವನ್ನು ಭರಿಸಲು ಸಾಧ್ಯವಾಗುತ್ತಿಲ್ಲ. ವಿನೋದ್ ಒಬ್ಬನೇ ಮಗನಾಗಿದ್ದು, ಕಿಡ್ನಿ ಕಸಿ ಮಾಡುವ ಅಗತ್ಯವಿದೆ. ಸಹಾಯ ಮಾಡುವ ದಾನಿಗಳ ಅಗತ್ಯವಿದೆ. ಸಹಾಯ ಮಾಡುವವರು ಆತನ ಕೊತ್ತತ್ತಿ ಗ್ರಾಮದ ಎಸ್‌ಬಿಐ ಖಾತೆಗೆ ನೆರವಿನ ಹಣ ಜಮೆ ಮಾಡಬಹುದಾಗಿದೆ.
ಎಸ್.ಬಿ. ಖಾತೆ ನಂ. 64186573007, ಐಎಫ್‌ಎಸ್‌ಸಿ :ಎಸ್‌ಬಿಐಎನ್0040172 ಹಾಕಬಹುದು. ಹೆಚ್ಚಿನ ಮಾಹಿತಿಗೆ ಮೊ.ನಂ: 9141740891 ಸಂಪರ್ಕಿಸಬಹುದು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net