ಷೇರು ಹೆಸರಿನಲ್ಲಿ 2 ಲಕ್ಷ ರೂ. ವಂಚನೆ

online fraud
Published on

ಮೈಸೂರು: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿದರೆ ಲಾಭ ಪಡೆಯಬಹುದು ಎಂದು ನಂಬಿಸಿ ವ್ಯಕ್ತಿಯೊಬ್ಬರಿಂದ 2 ಲಕ್ಷ ರೂ. ವಂಚಿಸಲಾಗಿದೆ.


ನಗರದ ಬೋಗಾದಿಯ ಮಂಜುನಾಥ್ ಹಣ ಕಳೆದುಕೊಂಡವರು. ಖಾಸಗಿ ಕಂಪನಿ ಮೂಲಕ ಹಣ ಹೂಡಿಕೆ ಮಾಡಿದಲ್ಲಿ ಹೆಚ್ಚು ಲಾಭ ಬರುತ್ತದೆ ಎಂದು ಸೈಬರ್ ಖದೀಮನೊಬ್ಬ ವ್ಯಾಟ್ಸ್‌ಆ್ಯಪ್ ಕರೆ ಮೂಲಕ ಮಾತನಾಡಿದ್ದಾನೆ.


ಈತನ ಮಾತನ್ನು ನಂಬಿದ ಮಂಜುನಾಥ್ ಅವರು ಹಂತ ಹಂತವಾಗಿ 2.04 ಲಕ್ಷ ರೂ.ಗಳನ್ನು ತಮ್ಮ ಖಾತೆಯಿಂದ ವರ್ಗಾವಣೆ ಮಾಡಿದ್ದಾರೆ. ಕೆಲವು ದಿನಗಳ ಬಳಿಕ ಹಣ ವಾಪಸ್ ಬಾರದಿರುವುದನ್ನು ಗಮನಿಸಿದ ಇವರಿಗೆ ತಾವು ಮೋಸ ಹೋಗಿರುವುದು ಅರಿವಿಗೆ ಬಂದಿದೆ.

ಇವರು ನೀಡಿದ ದೂರಿನ ಮೇರೆಗೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net