ಕೋಂಬಾರು ದೇವಳಕ್ಕೆ 2 ಲ.ರೂ ನೆರವು

New Project (36)
Published on

ಕಡಬ: ಕಡಬ ತಾಲೂಕು ಕೊಂಬಾರು ಗ್ರಾಮದ ಬೋಲ್ನಡ್ಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಧರ್ಮಸ್ಥಳ ಕ್ಷೇತ್ರದಿಂದ ನೀಡಲ್ಪಟ್ಟ 2 ಲಕ್ಷ ರೂ.ಅನುದಾನದ ವಿತರಣೆ ಕಾರ್ಯಕ್ರಮ ದೇವಸ್ಥಾನದಲ್ಲಿ ನಡೆಯಿತು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಡಬ ತಾಲೂಕು ಯೋಜನಾಧಿಕಾರಿ ಮೇದಪ್ಪ ಗೌಡ ಎನ್.ಬಿಳಿನೆಲೆ ವಲಯದ ಕೊಂಬಾರು ಬೋಳ್ನಡ್ಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಸಮಿತಿಯ ಪದಾಧಿಕಾರಿಗಳಿಗೆ ವಿತರಿಸಿದರು.

ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಸ್ಥಾನ ಆಡಳಿತ ಸಮಿತಿ ಅಧ್ಯಕ್ಷ ಶಿವಪ್ರಸಾದ್ ಕಾರ್ಯಾತಡ್ಕ ವಹಿಸಿದ್ದರು. ಕೊಂಬಾರು ಗ್ರಾಪಂ ಅಧ್ಯಕ್ಷ ಮಧುಸೂದನ್ ಒಡೋಳಿ, ಕೊಂಬಾರು ಒಕ್ಕೂಟದ ಅಧ್ಯಕ್ಷ ಧರ್ಮಪಾಲ ಗೌಡ ಕೋಲ್ಪೆ, ಕೆಂಜಾಳ ಒಕ್ಕೂಟದ ಅಧ್ಯಕ್ಷ ವಿಶ್ವನಾಥ ಗೌಡ ಕೊಡೆಂಕಿರಿ, ಬಿಳಿನೆಲೆ ವಲಯ ಮೇಲ್ವಿಚಾರಕ ರವಿಪ್ರಸಾದ್ ಆಲಾಜೆ, ಒಕ್ಕೂಟ ಕಾರ್ಯದರ್ಶಿಗಳಾದ ಚಿದಾನಂದ ದೇವುಪಾಲ್, ಚಂದ್ರಾವತಿ ಬೀಡು, ದೇವಸ್ಥಾನ ಪುನಃಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವದ ಪದಾಧಿಕಾರಿಗಳಾದ ಕೇಶವ ಗೌಡ ಪೂಯಿಲ, ಸಂಜೀವ ಅಗರಿ ಚೆನ್ನಕೇಶವ ಡಮ್ಮಡ್ಕ, ಬೇಬಿ ಪೂಯಿಲ, ಯಶೋದ ಉಪಸ್ಥಿತರಿದ್ದರು. ಸಿರಿಬಾಗಿಲು ಸೇವಾ ಪ್ರತಿನಿಧಿ ವಿನೋದ್ ಕೆ.ಸಿ.ಸ್ವಾಗತಿಸಿದರು. ಕೊಂಬಾರು ಸೇವಾಪ್ರತಿನಿಧಿ ಗಣೇಶ್ ಎ.ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net