2 ಲಕ್ಷ ರೂ. ಕಳ್ಳತನ

5 ckm 4
ಗೌರಿ ಕಾಲುವೆ ವಿನಾಯಕ ರಸ್ತೆಯ ನಿವಾಸಿ ನಾಗಭೂಷಣ್ ಭಟ್ ಅವರ ಮನೆಯ ಬಾಗಿಲು ಮುರಿದು ಒಳ ಪ್ರವೇಶಿಸಿರುವ ಕಳ್ಳರು ಮನೆಯಲ್ಲಿದ್ದ ಎರಡು ಲಕ್ಷ ರೂಪಾಯಿ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.
Published on

ಚಿಕ್ಕಮಗಳೂರು: ಮಗನ ಮದುವೆಗೆಂದು ಬೆಂಗಳೂರಿಗೆ ತೆರಳಿದ್ದ ನಗರದ ಗೌರಿ ಕಾಲುವೆ ವಿನಾಯಕ ರಸ್ತೆಯ ನಿವಾಸಿ ನಾಗಭೂಷಣ್ ಭಟ್ ಅವರ ಮನೆಯ ಬಾಗಿಲು ಮುರಿದು ಒಳ ಪ್ರವೇಶಿಸಿರುವ ಕಳ್ಳರು ಮನೆಯಲ್ಲಿದ್ದ ಎರಡು ಲಕ್ಷ ರೂಪಾಯಿ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.

ಮನೆಗೆ ಬೀಗ ಹಾಕಿ ಎದುರು ಮನೆಗೆ ಬೀಗ ಕೊಟ್ಟ ನಾಗಭೂಷಣ್ ಅವರು ಎರಡು ದಿನದ ಹಿಂದೆ ಮಗನ ಮದುವೆಗೆ ಎಂದು ಬೆಂಗಳೂರಿಗೆ ತೆರಳಿದ್ದರು. ಶನಿವಾರ ರಾತ್ರಿ ಮನೆಯ ಬೀಗ ಮುರಿದು ಒಳ ಪ್ರವೇಶಿಸಿದ ಕಳ್ಳರು ಮನೆಯಲ್ಲಿರುವ ವಸ್ತುಗಳನ್ನೆಲ್ಲ ಚಲ್ಲಾಪಿಲ್ಲಿ ಮಾಡಿ ಬೀರುವಿನಲ್ಲಿಟ್ಟಿದ್ದ ಎರಡು ಲಕ್ಷ ರೂಪಾಯಿ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ.
ಭಾನುವಾರ ಬೆಳಗ್ಗೆ ಮನೆಯ ಬಾಗಿಲು ತೆರೆದಿರುವುದನ್ನು ಗಮನಿಸಿದ ಎದುರು ಮನೆಯವರು ಬಂದು ನೋಡಿದಾಗ ಮನೆಯಲ್ಲಿ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಕೂಡಲೇ ವಿಷಯವನ್ನು ನಾಗಭೂಷಣ್ ಭಟ್ ಅವರಿಗೆ ತಿಳಿಸಲಾಗಿದ್ದು ಈ ಸಂಬಂಧ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net