

ಹಂಸಭಾವಿ: ಗ್ರಾಮದ ಪುಷ್ಪಾ ಕಲ್ಲನಗೌಡ ಪಾಟೀಲರ ಪುತ್ರ ಪ್ರಮೋದ ಪಾಟೀಲ 2021ರಲ್ಲಿ ಆಕಳಿಗೆ ನೀರು ಕುಡಿಸಲು ಹೋದ ವೇಳೆ ಕಾಲು ಜಾರಿ ಬಿದ್ದು ಮೃತಪಟ್ಟ ಹಿನ್ನೆಲೆಯಲ್ಲಿ ಮೃತರ ಕುಟುಂಬಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 2 ಲಕ್ಷ ರೂ.ಗಳ ಪರಿಹಾರದ ಚೆಕ್ ಅನ್ನು ಶಾಸಕ ಯು.ಬಿ. ಬಣಕಾರ ವಿತರಿಸಿದರು.
ಮಹೇಂದ್ರ ಬಡಳ್ಳಿ, ಬಾಬಣ್ಣ ಬೇಳವಗಿ, ಷಣ್ಮುಖ್ಯಯ್ಯ ಮಳೆಮಠ, ರಮೇಶ ಬಂಡಿವಡ್ಡರ, ಮುತ್ತಣ್ಣ ಕೆಳಗಿನಮನಿ, ಮಂಜುನಾಥ ಮುರಡಕ್ಕನವರ, ಶೈಪು ಪ್ಯಾಟಿ, ಮುಸ್ತಫಾ ಪ್ಯಾಟಿ, ರಾಜಶೇಖರ ಪಾಟೀಲ, ಮೌನೇಶಗೌಡ ಪಾಟೀಲ, ಪಿಎಸ್ಐ ಚಂದನ ಚಲುವಯ್ಯ, ಇತರರು ಉಪಸ್ಥಿತರಿದ್ದರು.