ಪವರ್ ಲಿಫ್ಟಿಂಗ್‌ನಲ್ಲಿ ಪೆಸಿಟ್‌ಗೆ 2 ಚಿನ್ನದ ಪದಕ

16 smg 5
ವಿಟಿಯು ಅಂತರ ಕಾಲೇಜು ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಪದಕಗಳನ್ನು ಪಡೆದ ಪೆಸಿಟ್ ಕಾಲೇಜಿನ ಪಿ.ಪವಿತ್ರಾ, ಕೆ.ಸುಮನ್, ಎಂ.ಸಂಜನಾ, ಯು.ಆರ್.ವೈಭವ್.
Published on

ಶಿವಮೊಗ್ಗ: ಬೆಳಗಾವಿಯ ಕೆಎಲ್‌ಎಸ್ ಗೋಗ್ಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಅಂತರಕಾಲೇಜು ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಪೆಸಿಟ್ ಕಾಲೇಜಿನ ನಾಲ್ವರು ಪದಕ ಪಡೆದಿದ್ದಾರೆ.

ನಗರದ ಪಿಇಎಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಗಳಾದ ಪಿ.ಪವಿತ್ರಾ(57 ಕೆಜಿ) ಹಾಗೂ ಕೆ.ಸುಮನ್(120 ಕೆಜಿ) ಚಿನ್ನದ ಪದಕ ಗೆದ್ದಿದ್ದಾರೆ. ಎಂ.ಸಂಜನಾ(69 ಕೆಜಿ), ಯು.ಆರ್.ವೈಭವ್(93 ಕೆಜಿ) ಕಂಚಿನ ಪದಕ ಗಳಿಸಿದ್ದಾರೆ.
ವಿದ್ಯಾರ್ಥಿಗಳ ಸಾಧನೆಯನ್ನು ಪ್ರೇರಣಾ ಎಜುಕೇಷನಲ್ ಆ್ಯಂಡ್ ಸೋಷಿಯಲ್ ಟ್ರಸ್ಟ್ ಆಡಳಿತ ಮಂಡಳಿ ಹಾಗೂ ಮುಖ್ಯ ಆಡಳಿತಾಧಿಕಾರಿ ಡಾ. ಆರ್.ನಾಗರಾಜ, ಪ್ರಾಚಾರ್ಯ ಡಾ. ಎಂ.ವಿ.ಚೈತನ್ಯಕುಮಾರ್ ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net