2 ಗಾಂಜಾ ಗಿಡ ವಶ, ಆರೋಪಿ ಬಂಧನ

2 Dwd 9
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಜಮೀನಿನಲ್ಲಿ ಬೆಳೆದಿದ್ದ ಗಾಂಜಾ ಗಿಡವನ್ನು ವಶಪಡಿಸಿಕೊಂಡಿರುವ ಜಿಲ್ಲಾ ಸಿಇಎನ್ ಅಪರಾಧ ಠಾಣೆ ಪೊಲೀಸರು, ಆರೋಪಿಯೊಬ್ಬನನ್ನು ಭಾನುವಾರ ಬಂಧಿಸಿದ್ದಾರೆ. ಕುಂದಗೋಳ ತಾಲೂಕಿನ ಹರ್ಲಾಪುರದ ಶೇಕಪ್ಪ ಸಿದ್ದಪ್ಪ ಮೂಲಿಮನಿ (55) ಬಂಧಿತ ಆರೋಪಿ. ಈತ ಸಾಗುವಳಿ ಮಾಡುತ್ತಿದ್ದ ನೀಲಪ್ಪ ದೊಡ್ಡಮನಿ ಎಂಬುವರ ಜಮೀನಿನಲ್ಲಿ 736 ಗ್ರಾಂ ತೂಕದ 2 ಗಾಂಜಾ ಗಿಡಗಳನ್ನು ಬೆಳೆದಿದ್ದ. ಖಚಿತ ಮಾಹಿತಿ ಮೇರೆಗೆ ಎಸ್‌ಪಿ ಡಾ. ಗೋಪಾಲ ಬ್ಯಾಕೋಡ, ಡಿಎಸ್‌ಪಿ ನಾರಾಯಣ ಬರಮಣಿ ಹಾಗೂ ಸಿಇಎನ್ ಡಿಎಸ್‌ಪಿ ಶಿವಾನಂದ ಕಟಗಿ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಮುರಗೇಶ ಟಿ.ಎಸ್. ದಾಳಿ ನಡೆಸಿ 2 ಹಸಿ ಗಾಂಜಾ ಗಿಡಗಳನ್ನು ವಶಪಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸಿಬ್ಬಂದಿ ಯು.ಡಿ. ದುದಾಳಕರ, ಎನ್.ಬಿ. ಕಂಬೋಗಿ, ಬಸವರಾಜ ಶಿರಕೋಳ, ಶಶಿಧರ ಕೊಚ್ಚರಗಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net