ಬೈಕ್ ಮರಕ್ಕೆ ಡಿಕ್ಕಿ ಹೊಡೆದು ಇಬ್ಬರು ಬಾಲಕರು ಸ್ಥಳದಲ್ಲಿಯೇ ಮೃತ

Published on

ನರೇಗಲ: ನಿಯಂತ್ರಣ ತಪ್ಪಿದ ಬೈಕ್ ಮರಕ್ಕೆ ಡಿಕ್ಕಿ ಹೊಡೆದು ಇಬ್ಬರು ಬಾಲಕರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಶುಕ್ರವಾರ ಮಧ್ಯಾಹ್ನ ರೋಣ ಪಟ್ಟಣದ ಬಸ್ ಡಿಪೋ ಬಳಿ ಈ ದುರ್ಘಟನೆ ಜರುಗಿದೆ.

ಅನೂಪ ಇಟಗಿ (೧೫) ಶ್ರೀಶಾಂತ ಗಡಗಿ (೧೫ ) ಮೃತಪಟ್ಟ ದುರ್ಧೈವಿಗಳು ಎಂದು ಗುರುತಿಸಲಾಗಿದೆ. ಅಬ್ಬಿಗೇರಿ ಗ್ರಾಮದ ಬಳಿ ಇರುವ ಕಲಾಕಾಶಿ ಈಜು ಕೊಳಕ್ಕೆ ಹೋಗಿ ವಾಪಸು ರೋಣಕ್ಕೆ ಬರುವಾಗ ಬೈಕ್ ನಿಯಂತ್ರಣ ಕಳೆದುಕೊಂಡು ಈ ಘಟನೆ ಜರುಗಿದೆ. ಮತ್ತೊಬ್ಬ ಬಾಲಕ ಮೌನೇಶ್ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತ ಇಬ್ಬರೂ ಬಾಲಕರು ರೋಣ ಪಟ್ಟಣದ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ರೋಣ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರೋಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net