

ಮೈಸೂರು: ನಗರದಲ್ಲಿ ಶುಕ್ರವಾರ ಸಂಜೆ ಸುರಿದ ಗುಡುಗು, ಬಿರುಗಾಳಿ ಸಹಿತ ಮಳೆಗೆ ಸಾವಿರಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲ್ಲಕ್ಕುರುಳಿದರೆ, ಟ್ರಾನ್ಸ್ ಫಾರ್ಮಾರ್ ಸುಟ್ಟು ಸೆಸ್ಕ್‌ಗೆ ಅಂದಾಜು 2 ಕೋಟಿ ರೂ. ನಷ್ಟ ಸಂಭವಿಸಿದೆ.
ವರುಣನ ಜತೆಗೆ ಗಾಳಿಯೂ ಬಿರುಗಾಳಿಯಂತೆ ಸೇರಿದ ಪರಿಣಾಮ ನಷ್ಟದ ಪ್ರಮಾಣ ಹೆಚ್ಚಾಗಿಯೇ ಉಂಟಾಗಿದೆ. ಸೆಸ್ಕ್ ವ್ಯಾಪ್ತಿಯ 5 ಜಿಲ್ಲೆಗಳಲ್ಲಿ ಒಟ್ಟು 1500 ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. 40 ಟ್ರಾನ್ಸ್‌ಫಾರ್ಮರ್(ಟಿಸಿ) ಸುಟ್ಟುಹೋಗಿವೆ. ಈ ಪರಿಣಾಮ ವಿದ್ಯುತ್ ಪೂರೈಕೆ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ಇದರಿಂದ ಸೆಸ್ಕ್‌ಗೆ ದೊಡ್ಡ ಪ್ರಮಾಣದಲ್ಲಿ ನಷ್ಟವಾಗಿದೆ.
ಇದೀಗ ಸಿಬ್ಬಂದಿಗಳ ಪರಿಶ್ರಮದ ಪರಿಣಾಮ ಶೇ.100 ರಷ್ಟು ದುರಸ್ತಿ ಕಾರ್ಯ ಸಂಪೂರ್ಣಗೊಂಡಿದೆ. ಎಲ್ಲ ಮಾರ್ಗಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ.