ದೇಶದಲ್ಲಿ 2 ಕೋಟಿ ಫಾಸ್ಟ್ಯಾಗ್​ ಬಳಕೆದಾರರು

fastag
Published on

ಬೆಂಗಳೂರು: ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಟೋಲ್​ಪ್ಲಾಜಾಗಳಲ್ಲಿ ಫಾಸ್ಟ್ಯಾಗ್​ ಮೂಲಕ ಟೋಲ್​ ಶುಲ್ಕ ಪಾವತಿಸುವುದು ಕಡ್ಡಾಯವಾಗಿಸಲಾಗಿದೆ. ಹೀಗಾಗಿ ಬಹುತೇಕ ವಾಹನಗಳು ಫಾಸ್ಟ್ಯಾಗ್​​ ಅಳವಡಿಸಿಕೊಳ್ಳುತ್ತಿದ್ದು, ಈವರೆಗೆ 2 ಕೋಟಿ ವಾಹನಗಳ ಫಾಸ್ಟ್ಯಾಗ್​ ಅಳವಡಿಸಿಕೊಂಡಿವೆ.

ಟೋಲ್​ ಪ್ಲಾಜಾಗಳಲ್ಲಿ ಕಾಯುವಿಕೆ ಸಮಯ ಕಡಿಮೆ ಮಾಡಲು, ಇಂಧನ ಉಳಿತಾಯ ಹಾಗೂ ಟೋಲ್​ ಶುಲ್ಕ ವಸೂಲಿಯ ಸಮರ್ಪಕ ಲೆಕ್ಕವಿಡುವ ಸಲುವಾಗಿ 2021ರ ಜ. 15ರಿಂದ ಫಾಸ್ಟ್ಯಾಗ್​​ ಮೂಲಕ ಟೋಲ್​ ಶುಲ್ಕ ಪಾವತಿ ಕಡ್ಡಾಯವಾಗಿಸಲಾಗಿದೆ. ಒಂದು ವೇಳೆ ಫಾಸ್ಟ್ಯಾಗ್ ಅಳವಡಿಸಿಕೊಳ್ಳದೆ ಫಾಸ್ಟ್ಯಾಗ್​ ಪಥದಲ್ಲಿ ಸಂಚರಿಸಿದರೆ ದುಪ್ಪಟ್ಟು ಶುಲ್ಕ ಪಾವತಿಸಬೇಕಿದೆ. ಹೀಗಾಗಿ ದೇಶದ ಬಹುತೇಕ ವಾಹನಗಳು ಫಾಸ್ಟ್ಯಾಗ್ ವ್ಯವಸ್ಥೆ ಅಳವಡಿಸಿಕೊಳ್ಳುತ್ತಿವೆ.

ಫಾಸ್ಟ್ಯಾಗ್​ ವ್ಯವಸ್ಥೆಗೂ ಮುನ್ನ 10ರಿಂದ 15 ಲಕ್ಷ ವಾಹನಗಳಷ್ಟೇ ಫಾಸ್ಟ್ಯಾಗ್​ ವ್ಯಾಪ್ತಿಯಲ್ಲಿದ್ದವು. ಕಳೆದ ಒಂಭತ್ತೂವರೆ ತಿಂಗಳಲ್ಲಿ 2 ಕೋಟಿ ವಾಹನಗಳು ಫಾಸ್ಟ್ಯಾಗ್ ವ್ಯಾಪ್ತಿಗೆ ಬಂದಿವೆ. ಫಾಸ್ಟ್ಯಾಗ್​ ಕಡ್ಡಾಯ ಆದೇಶ ಜಾರಿ ನಂತರ ಟೋಲ್​ ಶುಲ್ಕ ಸಂಗ್ರಹದಲ್ಲೂ ಹೆಚ್ಚಳವಾಗಿದೆ. ಫಾಸ್ಟ್ಯಾಗ್​ಗೂ ಮುನ್ನ ದೇಶಾದ್ಯಂತ ಪ್ರತಿದಿನ ಸರಾಸರಿ 70 ಕೋಟಿ ರೂ. ಟೋಲ್​ ಶುಲ್ಕ ವಸೂಲಿಯಾಗುತ್ತಿತ್ತು. ಆದರೀಗ ಅದು ಸರಾಸರಿ 92 ಕೋಟಿ ರೂ.ಗೂ ಏರಿಕೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net