2 ಕ್ರೇಟ್ ಟೊಮ್ಯಾಟೊ ಕಳವು

vegitabales
ಎರಡು ಕ್ರೇಟ್ ಟೊಮ್ಯಾಟೊ ಕಳವಾಗಿರುವ ಆಲ್ದೂರಿನ ನದೀಮ್ ಪಾಷಾ ಅವರ ತರಕಾರಿ ಅಂಗಡಿ.
Published on

ಆಲ್ದೂರು: ಪೊಲೀಸ್ ಠಾಣೆ ಪಕ್ಕದಲ್ಲೇ ಇರುವ ತರಕಾರಿ ಅಂಗಡಿಯಲ್ಲಿ ಸೋಮವಾರ ತಡರಾತ್ರಿ ಎರಡು ಕ್ರೇಟ್ ಟೊಮ್ಯಾಟೊವನ್ನು ಕದ್ದೊಯ್ಯಲಾಗಿದೆ.

ಸ್ಥಳೀಯವಾಗಿ ಒಂದು ಕೆಜಿ ಟೊಮ್ಯಾಟೊ 100 ರೂಪಾಯಿವರೆಗೆ ಮಾರಾಟವಾಗುತ್ತಿದೆ. ಟಾರ್ಪಾಲ್ ಹಾಕಿರುವ ನದೀಮ್ ಪಾಷಾ ಅವರ ಅಂಗಡಿಯಲ್ಲಿ 2500-3000 ಸಾವಿರ ರೂ. ಮೌಲ್ಯದ ಟೊಮ್ಯಾಟೊ ಹೊತ್ತೊಯ್ಯಲಾಗಿದೆ. ಮಂಗಳವಾರ ಬೆಳಗ್ಗೆ ಮಾಲೀಕ ಅಂಗಡಿ ತೆರೆದಾಗ ಕಳವಾಗಿದ್ದು ಗಮನಕ್ಕೆ ಬಂದಿದೆ. ಟೊಮ್ಯಾಟೊ ಕಳವು ಮಾಡಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಹಲವು ವರ್ಷಗಳಿಂದ ತರಕಾರಿ ವ್ಯಾಪಾರ ಮಾಡುತ್ತಿದ್ದೇನೆ. ಟೊಮ್ಯಾಟೊ ಬೆಲೆ 100 ರೂಪಾಯಿ ಆಗಿರುವುದೇ ಪ್ರಥಮ ಬಾರಿಗೆ ನನ್ನ ಅಂಗಡಿಯಲ್ಲಿ ಕಳ್ಳತನವಾಗಲು ಕಾರಣ. ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ ಎಂದು ನದೀಮ್ ಪಾಷಾ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net