ಮೈಸೂರು: ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಶುಕ್ರವಾರ ಮರವೊಂದು ಉರುಳಿ ಬಿದ್ದು ಎರಡು ಆಟೋಗಳು ಜಖಂಗೊಂಡಿತು..ಕರ್ಜಮ್ ಉದ್ಯಾನದಲ್ಲಿ ಬೆಳೆದು ನಿಂತಿದ್ದ ಮರ ಕುಸಿದು ಬಿತ್ತು. ಮರದ ಬಳಿಯಲ್ಲಿ ಆಟೋಗಳು ನಿಂತಿದ್ದವು. ಅದೃಷ್ಟವಶಾತ್ ಚಾಲಕರಾದ ಸಲೀಂ ಹಾಗೂ ಆಸಿಫ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.