2 ಎತ್ತು ಕದ್ದವರಲ್ಲಿ ಒಬ್ಬನ ಬಂಧನ

ಬಂಧನ.
Published on

ಕುಮಟಾ‌: ದನ ಕಳ್ಳತನ ಮಾಡಿದ್ದ ಒಬ್ಬ ಆರೋಪಿಯನ್ನು ಕುಮಟಾ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಕುಮಟಾ ಹೆಗಡೆಯ ಶಾಂತಿಕಾ ದೇವಸ್ಥಾನದ ಎದುರು ರಥ ಬೀದಿಯಲ್ಲಿ ಮಲಗಿದ್ದ ಎರಡು ಎತ್ತುಗಳು ಕಳ್ಳತನವಾಗಿರುವ ಬಗ್ಗೆ ಪವನಕುಮಾರ ವಿನೋದ ಪ್ರಭು ಎಂಬುವವರು ಅ.9 ರಂದು ದೂರು ದಾಖಲಿಸಿದ್ದರು. ತನಿಖೆ ಕೈಗೊಂಡ ಕುಮಟಾ‌ ಪೊಲೀಸರು ಭಟ್ಕಳ ಮುರ್ಡೇಶ್ವರದ ಹಸನ್ ಅಬು ಮೊಹಮದ್ ಗೈಮಾ ಎಂಬಾತನನ್ನು ಬಂಧಿಸಿದ್ದಾರೆ. ಇನ್ನಿಬ್ಬರು ತಲೆಮರೆಸುಕೊಂಡಿದ್ದು, ಅವರ ಪತ್ತೆಗೆ ಬಲೆ ಬೀಸಲಾಗಿದೆ. ಕಳ್ಳತನಕ್ಕೆ ಬಳಸಿದ್ದ ಸ್ಕಾರ್ಪಿಯೋ ವಾಹನವನ್ನು ವಶಕ್ಕೆ ಪಡೆಯಲಾಗಿದೆ.

ಭಟ್ಕಳದಲ್ಲೂ ಬಂಧನ

ಭಟ್ಕಳದಲ್ಲಿ ಗೋ ಕಳ್ಳತನ ಮಾಡುತ್ತಿದ್ದ ಮೂವರನ್ನು ಪೊಲೀಸರು ಎರಡು ದಿನಗಳ ಹಿಂದೆ ಬಂಧಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net